DistrictsLifestyle

ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆ ದಿನ; ನಾಳೆ ದೇಗುಲದ ಬಾಗಿಲು ಬಂದ್‌

ಹಾಸನ; 12 ದಿನಗಳಿಂದ ಭಕ್ತರಿಗೆ ದರ್ಶನ ನೀಡುತ್ತಿದ್ದ ಹಾಸನಾಂಬೆ ಇವತ್ತು ಮಾತ್ರ ದರ್ಶನ ನೀಡಲಿದ್ದಾಳೆ. ನಿಗದಿಯಂತೆ ನಾಳೆ ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ದೇಗುಲವನ್ನು ಮುಚ್ಚಲಾಗುತ್ತದೆ. ಹೀಗಾಗಿ ಕೊನೆಯ ದಿನ ಭಕ್ತ ಸಾಗರವೇ ಹರಿದುಬಂದಿದೆ. ಇಂದು ಬೆಳಗ್ಗೆ ಏಳು ಗಂಟೆಯಿಂದ ದೇವಿಯ ದರ್ಶನ ಶುರುವಾಗಿದೆ. ಸಂಜೆ ನಾಲ್ಕು ಗಂಟೆಯವರೆಗೂ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದಾರೆ.

ಇಂದು ಸಂಜೆ ನಾಲ್ಕು ಗಂಟೆಯಿಂದ ಹನ್ನೊಂದು ಗಂಟೆಯವರೆಗೆ ದೇವಿಗೆ ಮಹಾನೈವೇದ್ಯ ಮಾಡಲಾಗುತ್ತದೆ, ಜೊತೆಗೆ ದೇವಿಯ ಉತ್ಸವವಿರುತ್ತದೆ. ಅನಂತರ ರಾತ್ರಿ ಹನ್ನೊಂದು ಗಂಟೆಯಿಂದ ಬೆಳಗ್ಗೆ ಏಳು ಗಂಟೆಯವರೆ ಕೂಡಾ ಭಕ್ತರು ದೇವಿಯ ದರ್ಶನ ಪಡೆಯಬಹುದು. ನಿನ್ನೆ ಗ್ರಹಣ ಇದ್ದಿದ್ದರಿಂದ ದೇವಿಯ ದರ್ಶನಕ್ಕೆ ಬ್ರೇಕ್‌ ನೀಡಲಾಗಿತ್ತು. ಹೀಗಾಗಿ ಇಂದು ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ.

Share Post