ಡೆಪಾಸಿಟ್ ಮಷಿನ್‌ನಲ್ಲಿ ಸಿಕ್ತು 52 ಸಾವಿರ ಹಣ; ಹಂಗೇ ಎಗರಿಸಿಬಿಟ್ಟ ಆಸಾಮಿ..!
ದಾವಣಗೆರೆ; ಬ್ಯಾಂಕ್‌ಗೆ ಹಣ ಡೆಪಾಸಿಟ್ ಮಾಡುವ ಮಷಿನ್‌ನನ್ನು ವ್ಯಕ್ತಿಯೊಬ್ಬ 52 ಸಾವಿರ ರೂಪಾಯಿ ಡೆಪಾಸಿಟ್ ಮಾಡಲು ಬಂದಿದ್ದಾನೆ. ಆತ ಹಣವನ್ನು ಮಷಿನ್‌ನಲ್ಲಿ ಇಟ್ಟು ಎಂಟರ್ ಮಾಡಿದ್ದಾನೆ. ಅದನ್ನು ಮಷಿನ್ ಎಣಿಸಿದೆ. ಅನಂತರ ಡೆಪಾಸಿಟ್ ಬಟನ್ ಒತ್ತುವುದನ್ನು ಮರೆತು ಡೆಪಾಸಿಟ್ ಆಗಿದೆ ಎಂದೇ ತಿಳಿದು ಅಲ್ಲಿಂದ ತೆರಳಿದ್ದಾನೆ. ಅನಂತರ ಬಂದ ಗ್ರಾಹಕನಿಗೆ ಆ ಹಣ ಕಾಣಿಸಿದೆ. ಕೂಡಲೇ ಆತ ಅದನ್ನು ಎತ್ತಿಕೊಂಡು ಎಸ್ಕೇಪ್ ಆಗಿದ್ದಾನೆ.
ಇದು ದಾವಣಗೆರೆಯ ಪಿಬಿ ರಸ್ತೆಯ ರಿಲಾಯನ್ಸ್ ಮಾರ್ಟ್ ಎದುಗಿರಿಉವ ಐಸಿಐಸಿಐ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ನಡೆದಿದೆ. ವಿಜಯ್ ಎಂಬುವವರಿಗೆ ಸೇರಿದ ಹಣ ಇದಾಗಿದೆ. ಈ ಹಣವನ್ನು ಮತ್ತೊಬ್ಬ ವ್ಯಕ್ತಿ ತೆಗೆದುಕೊಂಡು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ದೂರು ನೀಡಿದ 15 ದಿನವಾದರೂ ಆರೋಪಿಯನ್ನು ಹಿಡಿಯಲಾಗಿಲ್ಲ. ಹೀಗಾಗಿ ಹಣ ಕಳೆದುಕೊಂಡವರು ಪೊಲೀಸರು ಹಾಗೂ ಬ್ಯಾಂಕ್ ಸಿಬ್ಬಂದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.