ಹಾವು ಕಚ್ಚಿದ್ದರೆ ಮುಳ್ಳು ಚುಚ್ಚಿದೆ ಎಂದುಕೊಂಡು ಮಲಗಿದ ವ್ಯಕ್ತಿ ಬೆಳಗ್ಗೆ ಏಳಲೇ ಇಲ್ಲ!
ಚಿಕ್ಕಮಗಳೂರು; ಸಂಜೆ ಸ್ವಲ್ಪ ಕತ್ತಲಿದ್ದ ಸಮಯದಲ್ಲಿ ರೈತನೊಬ್ಬ ಹೊಲದಲ್ಲಿ ಕೆಲಸ ಮಾಡುವಾಗ ಏನೋ ಚುಚ್ಚಿದಂತೆ ಆಗಿದೆ.. ಮುಳ್ಳು ಚುಚ್ಚಿರಬಹುದೆಂದು ರೈತ ಸುಮ್ಮನಾಗಿದ್ದಾನೆ.. ಮನೆಗೆ ಬಂದು ಊಟ ಮಾಡಿ ಮಲಗಿದ್ದಾನೆ.. ಆದ್ರೆ ಬೆಳಗ್ಗೆ ಎದ್ದೇ ಇಲ್ಲ.. ಮಲಗಿದ್ದಲ್ಲೇ ಸಾವನ್ನಪ್ಪಿದ್ದಾನೆ.. ಇದಕ್ಕೆ ಕಾರಣ ಹಾವು ಕಡಿತ.. ಹಾವು ಕಚ್ಚಿದ್ದರೂ ರೈತ ಮುಳ್ಳು ಚುಚ್ಚಿದೆ ಎಂದು ಕೊಂಡು ಸುಮ್ಮನಿದ್ದುದರಿಂದ ಪ್ರಾಣ ಕಳೆದುಕೊಂಡಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.. 44 ವರ್ಷದ ಗಂಗಪ್ಪ ಎಂಬ ರೈತನೇ ಸಾವನ್ನಪ್ಪಿದವನು.. ನಿನ್ನೆ ಸಂಜೆ ಅವರು ಜಮೀನಿನಲ್ಲಿ ಕೆಲಸ ಮಾಡುವಾಗ ಎರಡು ಬಾರಿ ಚುಚ್ಚಿದ ಅನುಭವವಾಗಿದೆ.. ಆದ್ರೆ ಅದು ಹಾವು ಕಚ್ಚಿದೆ ಎಂದು ಅವರು ಅಂದುಕೊಂಡಿಲ್ಲ.. ಬದಲಾಗಿದೆ ಮುಳ್ಳು ಚುಚ್ಚಿರಬಹುದು ಎಂದು ಸುಮ್ಮನಾಗಿದ್ದಾರೆ.. ಆದ್ರೆ ಅವರಿಗೆ ಎರಡು ಬಾರಿ ಹಾವು ಕಚ್ಚಿದೆ..
ಇದರ ಅರಿವೇ ಇಲ್ಲದೇ ಗಂಗಪ್ಪ ಅವರು ಮನೆಗೆ ಬಂದು ಊಟ ಮಾಡಿ ಮಲಗಿದ್ದಾನೆ.. ಈ ವೇಳೆ ಮೈಗೆ ವಿಷ ಹತ್ತಿ ಮಲಗಿದಲ್ಲಿಯೇ ಸಾವನ್ನಪ್ಪಿದ್ದಾರೆ.. ಬೆಳಗ್ಗೆ ಮನೆಯವರು ಎಬ್ಬಿಸಿದಾಗಿ ಅವರು ಎದ್ದಿಲ್ಲ.. ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ ಹಾವು ಕಚ್ಚಿ ಸಾವನ್ನಪ್ಪಿರುವ ಬಗ್ಗೆ ತಿಳಿದುಬಂದಿದೆ.. ಎರಡು ಬಾರಿ ಹಾವು ಹಚ್ಚಿದೆ ಎಂದು ವೈದ್ಯರು ಹೇಳಿದ್ದಾರೆ.. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.