CrimeDistricts

ಬಾಲಕಿ ಎದುರೇ ಹೆಡೆ ಎತ್ತಿತು ನಾಗರ ಹಾವು; ಮುಂದೇನಾಯ್ತು ಗೊತ್ತಾ..?

ಬೆಳಗಾವಿ; ಮಳೆ ಶುರುವಾಗಿದೆ. ಈ ಸಮಯದಲ್ಲಿ ಹಾವುಗಳು ಎಲ್ಲೆಂದರಲ್ಲಿ ಕಾಣಸಿಗುತ್ತದೆ. ಒಮ್ಮೊಮ್ಮೆ ಮನೆಗಳಿಗೂ ಹಾವುಗಳು ನುಗ್ಗುತ್ತವೆ. ಇಂತಹ ಸಮಯದಲ್ಲಿ ಯಾರಿಗೂ ಕಚ್ಚಿ ಅನಾಹುತಗಳೂ ಆಗುವುದುಂಟು. ಅದೇ ರೀತಿ ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ಪುಟ್ಟ ಬಾಲಕಿಯೊಬ್ಬಳು ನಾಗರ ಹಾವಿಗೆ ಬಲಿಯಾಗಬೇಕಿತ್ತು. ಆದ್ರೆ ಅದೃಷ್ಟವಶಾತ್‌ ಅದರಿಂದ ಪಾರಾಗಿ ಪ್ರಾಣ ಉಳಿಸಿಕೊಂಡಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಎಲ್ಲೆಡೆ ವೈರಲ್‌ ಆಗುತ್ತಿದೆ.

ಹಲಗಾ ಗ್ರಾಮದಲ್ಲಿ ನಾಗರಹಾವೊಂದು ಮನೆ ಬಾಗಿಲ ಹೊಸ್ತಿಲಿಗೆ ಬಂದಿದೆ. ಇದೇ ವೇ:ಎ ಪಕ್ಕದ ಮನೆಯ ಬಾಲಕಿ ಕೂಡಾ ಮನೆಯೊಳಗೆ ಹೋಗುತ್ತಿದ್ದಳು. ಬಾಲಕಿ ಮನೆ ಹೊಸ್ತಿಲ ಬಳಿ ಬರುತ್ತಿದ್ದಂತೆ ನಾಗರ ಹಾವು ಹೆಡೆ ಎತ್ತಿ ನಿಂತಿದೆ. ಇದರಿಂದ ಗಾಬರಿಗೊಂಡ ಬಾಲಕಿ ತಕ್ಷಣವೇ ಮನೆಯೊಳಗೆ ಓಡಿದ್ದಾಳೆ.

ತಕ್ಷಣವೇ ಬಾಲಕಿ ಮನೆಯೊಳಗೆ ಓಡಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇಲ್ಲದೆ ಹೋಗಿದ್ದರೆ ಹಾವು ಕಚ್ಚುವ ಅಪಾಯವಿತ್ತು. ಆದ್ರೆ, ಬಾಲಕ ಅದೃಷ್ಟ ಚೆನ್ನಾಗಿತ್ತು. ಹೀಗಾಗಿ ಬಚಾವ್‌ ಆಗಿದ್ದಾಳೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

Share Post