Bengaluru

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; 15 ದಿನ ಹಳೇ ಪಾಸ್‌ನಲ್ಲೇ ಓಡಾಡಬಹುದು..!

ಬೆಂಗಳೂರು; ಶಾಲೆಗಳು ಶುರುವಾಗಿವೆ. ಆದ್ರೆ ಬಸ್‌ ಪಾಸ್‌ಗಳು ಇನ್ನೂ ವಿತರಣೆಯಾಗುತ್ತಿಲ್ಲ. ಹೀಗಾಗಿ ಸರ್ಕಾರ, ವಿದ್ಯಾರ್ಥಿಗಳು ಹದಿನೈದು ದಿನಗಳ ಕಾಲ ಉಚಿತವಾಗಿ ಓಡಾಡಲು ಅವಕಾಶ ಮಾಡಿಕೊಟ್ಟಿದೆ.

ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್  ಅವಧಿಯನ್ನು ಜೂನ್‌ ೧೫ರ ತನಕ ವಿಸ್ತರಣೆ ಮಾಡಿ ಕೆಎಸ್‌ಆರ್‌ಟಿಸಿ ಆದೇಶ ಮಾಡಿದೆ.  ಇದು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನ್ವಯವಾಗಲಿದ್ದು,  ಹಿಂದಿನ ವರ್ಷದ ಪಾಸನ್ನೇ ಬಸ್ ಗಳಲ್ಲಿ ತೋರಿಸಿ ಪ್ರಯಾಣ ಮಾಡಬಹುದು. ಪಾಸ್ ಇಲ್ಲದಿದ್ರೆ ಪ್ರಸಕ್ತ ವರ್ಷದ ಶಾಲಾ ಶುಲ್ಕ ರಸೀದಿ ತೋರಿಸಿಬೇಕೆಂದು ಕೆಎಸ್​ಆರ್​​ಟಿಸಿ ತನ್ನ ಆದೇಶದಲ್ಲಿ ತಿಳಿಸಿದೆ.

Share Post