ಮೋದಿ ಮೇಲೆ ದಾಳಿಗೆ ಸಂಚು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಚಿಂಗ್
ಮಂಗಳೂರು; ಕಳೆದ ವರ್ಷ ಬಿಹಾರದ ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕಕಾಲದಲ್ಲಿ 16 ಕಡೆ ದಾಳಿ ನಡೆಸಿದ್ದಾರೆ. ಇದರಿಂದಾಗಿ ಬಿಹಾರದಲ್ಲಿ ನಡೆಯಬೇಕಿದ್ದ ವಿದ್ವಂಸಕ ಕೃತ್ಯಕ್ಕೂ ಮಂಗಳೂರಿಗೂ ನಂಟಿದೆ ಎಂದು ಹೇಳಲಾಗುತ್ತಿದೆ.
2022ರಲ್ಲಿ ಬಿಹಾರದ ಪಟ್ನಾದಲ್ಲಿ ಪ್ರಧಾನಿ ಮೋದಿ ಮೇಲೆ ಅಟ್ಯಾಕ್ ಮಾಡಲು ಸಂಚು ರೂಪಿಸಲಾಗಿತ್ತು. ಈ ಸಂಬಂಧ ಪಲ್ವಾರಿ ಶರೀಫ್ ಎಂಬಾತನನ್ನು ಬಂಧಿಸಲಾಗಿತ್ತು. ಈತನ ಹೇಳಿಕೆ ಆಧಾರದ ಮೇಲೆ ಎನ್‌ಐಎ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪುತ್ತೂರು ಹಾಗೂ ಬಂಟ್ವಾಳದಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಮನೆಗಳು, ಕಚೇರಿಗಳು ಹಾಗೂ ಒಂದು ಆಸ್ಪತ್ರೆ ಮೇಲೂ ದಾಳಿ ಮಾಡಲಾಗಿದೆ. ಈ ಹಿಂದೆಯೂ ಕೂಡಾ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿತ್ತು.
ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲ ಹಣ ಪಡೆದು ಅದನ್ನು ಬಳಕೆ ಮಾಡಿದ ಆರೋಪದ ಮೇಲೆ ಈ ತನಿಖೆ ನಡೆಯುತ್ತಿದೆ.