ಮಠದ ಆವರಣದ ಬಾವಿಯಲ್ಲಿ ಬಿದ್ದು ಅತಿಥಿ ಶಿಕ್ಷಕಿ ಆತ್ಮಹತ್ಯೆ
ಚಿತ್ತಾಪುರ: ಸ್ವಾಮೀಜಿಯವರ ಆಪ್ತ ಸಹಾಯಕನ ಪತ್ನಿ ಹಾಗೂ ಅತಿಥಿ ಶಿಕ್ಷಕಿಯಾಗಿದ್ದ ಭೂಮಿಕಾ ಶರಣಪ್ಪ ಊಡಗಿ ಎಂಬುವವರು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠದ ಆವರಣದಲ್ಲಿದ್ದ ಬಾವಿಗೆ ಹಾರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಭೂಮಿಕಾ ಹಿರೇಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯ ಆಪ್ತಸಹಾಯಕ ಶರಣಪ್ಪ ಊಡಗಿ ಪತ್ನಿ ಎಂದು ತಿಳಿದುಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಭೂಮಿಕಾ ಅವರಿಗೆ 26 ವರ್ಷ ವಯಸ್ಸಾಗಿದ್ದು, ಆರು ವರ್ಷದ ಹಿಂದೆ ಶರಣಪ್ಪ ಊಡಗಿ ಅವರನ್ನು ಮದುವೆಯಾಗಿದ್ದರು. ಆದರೆ ಮಕ್ಕಳಾಗಿರಲಿಲ್ಲ. ಶುಕ್ರವಾರ ಮಧ್ಯಾಹ್ನ ಭೂಮಿಕಾ ಅವರು ಮನೆಯಿಂದ ಹೊರಗೆ ಹೋಗಿದ್ದರು. ಆದ್ರೆ ಎಷ್ಟು ಹೊತ್ತಾದರೂ ವಾಪಸ್ ಬಂದಿರಲಿಲ್ಲ. ಶಾಲೆ ಕೆಲಸಕ್ಕೆ ಕೂಡಾ ಹೋಗಿರಲಿಲ್ಲ. ಹೀಗಾಗಿ, ಹುಡುಕಾಡಿದಾಗ ಮಠದ ಬಾವಿಯ ಬಳಿ ಭುಮಿಕ ಚಪ್ಪಲಿ ಕಾಣಿಸಿವೆ. ಅನುಮಾನಗೊಂಡು ಬಾವಿಯಲ್ಲಿ ಹುಡುಕಾದ ಭೂಮಿ ಮೃತದೇಹ ಭಾವಿಯಲ್ಲಿ ಪತ್ತೆಯಾಗಿದೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.