ಮಲೆಮಹದೇಶ್ವರ ದೇವಸ್ಥಾನದಲ್ಲಿ ಎಡವಟ್ಟು; ಭಕ್ತನಿಗೆ ಲಡ್ಡು ಜೊತೆ 2 ಲಕ್ಷ ಬಾಯಿಗೆ ಬಿತ್ತು..!
ಚಾಮರಾಜನಗರ; ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದಲ್ಲಿ ಎಡವಟ್ಟೊಂದು ನಡೆದುಹೋಗಿದೆ. ಲಡ್ಡು ವಿತರಣಾ ಕೌಂಟರ್‌ನಲ್ಲಿ ಭಕ್ತರೊಬ್ಬರಿಗೆ ಲಡ್ಡು ಚೀಲದ ಜೊತೆಗೆ 2.19 ಲಕ್ಷ ರೂಪಾಯಿ ಇದ್ದ ಚೀಲವನ್ನೂ ಕೊಡಲಾಗಿದೆ. ಭಕ್ತ ಅದನ್ನು ತೆಗೆದುಕೊಂಡು ಹೋದ ನಂತೆ ಸಿಬ್ಬಂದಿಗೆ ಹಣ ಕೊಟ್ಟಿರುವ ವಿಚಾರ ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಹೌದು, ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆಗೆ 2.19 ಲಕ್ಷ ರೂಪಾಯಿ ಭಕ್ತನ ಪಾಲಾಗಿದೆ. ವಿಶೇಷ ದರ್ಶನಕ್ಕೆ ಟಿಕೆಟ್ ನೀಡಲು ಕುಳಿತಿದ್ದ ಸಿಬ್ಬಂದಿ ಭಕ್ತನಿಗೆ ಲಾಡು ಚೀಲದ ಜೊತೆಗೆ ಹಣದ ಚೀಲ ನೀಡಿದ್ದಾರೆ. ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪ ಹಣದ ಬ್ಯಾಗ್ ಕೂಡಾ ಇಡಲಾಗಿತ್ತು. ಹೀಗಾಗಿ, ಹಣದ ಬ್ಯಾಗನ್ನೇ ಲಡ್ಡು ಚೀಲ ಎಂದು ತಿಳಿದುಕೊಂಡು ಭಕ್ತನಿಗೆ ನೀಡಲಾಗಿದೆ. ಅದನ್ನು ಎತ್ತಿಕೊಂಡು ಭಕ್ತ ಅಲ್ಲಿಂದ ತೆರಳಿದ್ದಾನೆ.
ಈ ಬಗ್ಗೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ, ಹಣದ ಬ್ಯಾಗ್ ತೆಗೆದುಕೊಂಡು ಹೋದ ಭಕ್ತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.