TechTechnology

ಬರ್ತಿದೆ 5G ನೆಟ್‌ವರ್ಕ್‌; ಇನ್ನು ಮುಂದೆ 4G ಮೊಬೈಲ್‌ಗಳು ಕೆಲಸ ಮಾಡಲ್ಲವೇ..?

ನವದೆಹಲಿ; ಭಾರತದಲ್ಲಿ 5ಜಿ ನೆಟ್‌ವರ್ಕ್‌ ತರಂಗಾಂತರ ಹರಾಜು ಪ್ರಕ್ರಿಯೆ ಶುರುವಾಗಿದೆ. ಈ ಹರಾಜಿನಲ್ಲಿ ದೇಶದಲ್ಲಿನ ನಾಲ್ಕು ಟೆಲಿಕಾಂ ಕಂಪನಿಗಳು ಪಾಲ್ಗೊಳ್ಳುತ್ತಿವೆ. ಈ ರೇಸ್‌ನಲ್ಲಿ ರಿಲಾಯನ್ಸ್‌ ಕಂಪನಿ ಮುಂಚೂಣಿಯಲ್ಲಿದೆ. ಭಾರತೀಯ ಟೆಲಿಕಾಂ ಸಂಸ್ಥೆಗೆ ಜಿಯೋ 14000 ಕೋಟಿ ರೂಪಾಯಿ, ಭಾರತಿ ಏರ್‌ಟೆಲ್‌ ಸಂಸ್ಥೆ 5500 ಕೋಟಿ ರೂಪಾಯಿ, ಅದಾನಿ ಸಂಸ್ಥೆ 100 ಕೋಟಿ ರೂಪಾಯಿ, ವೋಡಫೋನ್‌ Yಡಿಯಾ 2200 ಕೋಟಿ ರೂಪಾಯಿಗಳನ್ನು ಡೆಪಾಸಿಟ್‌ ಮಾಡಿವೆ. 

   ಹಾಗಾದರೆ ತರಂಗಾಂತರ (ಸ್ಪೆಕ್ಟ್ರಂ) ಅಂದರೆ ಏನು..? ಅದು ಜನರ ದೈನಂದಿನ ಚಟುವಟಿಕೆಗಳಲ್ಲಿ ಹೇಗೆ ಪರಿಣಾಮ ಬೀರುತ್ತದೆ..? 5ಜಿ ಬಂದ ಮೇಲೆ 4ಜಿ ಇರುತ್ತದಾ ಇಲ್ಲವಾ..? ತಿಳಿದುಕೊಳ್ಳೋಣ.

     ಈ ಮೊದಲು ನಾವು ರೇಡಿಯೋ ಉಪಯೋಗಿಸುತ್ತಿದ್ದೆವು. ಅದರಲ್ಲಿ ಎಎಂ, ಮೀಡಿಯಂ ವೇವ್‌, ಎಫ್‌ಎಂ ಎಂದು ಇರುತ್ತಿತ್ತು. ಧ್ವನಿಯನ್ನು ಎಷ್ಟು ಮೆಗಾಹರ್ಟ್ಜ್‌ ಅಥವಾ ಕಿಲೋ ಹರ್ಟ್ಜ್‌ ನಲ್ಲಿ ಪ್ರಸಾರ ಮಾಡುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಈ ಕಾರಣದಿಂದಲೇ ನಾನಾ ರೀತಿ ಫ್ರೀಕ್ವೆನ್ಸಿಗಳಲ್ಲಿ ವಿಭಿನ್ನವಾದ ವಿಷಯಗಳನ್ನು ಕೇಳುವ ಅವಕಾಶವಿರುತ್ತಿತ್ತು.

   ಅದೇ ರೀತಿ 2ಜಿ, 3ಜಿ, 4ಜಿ, 5ಜಿ ಗಳಿಗೆ ಬೇರೆ ಫ್ರೀಕ್ವೆನ್ಸಿಗಳಿವೆ. ಸ್ಪೆಕ್ಟ್ರಮ್‌ ಎಂಬುದು ಮೊಬೈಲ್‌ ಕಮ್ಯುನಿಕೇಷನ್‌ ಗಾಗಿ ಉಪಯೋಗಿಸುವ ಫ್ರೀಕ್ವೆನ್ಸಿಗಳ ಶ್ರೇಣಿ. ಯಾವುದಾದರೂ ನೆಟ್‌ವರ್ಕ್‌ನ್ನು ವಿವಿಧ ಸ್ಪೆಕ್ಟ್ರಂ ಬ್ಯಾಂಡ್‌ಗಳಾಗಿ ವಿಭಜನೆ ಮಾಡುತ್ತಾರೆ. 5ಜಿ ಮೆಟ್‌ವರ್ಕ್‌ ವಿಷಯದಲ್ಲೂ ಅದೇ ರೀತಿ ಇರುತ್ತದೆ. ಇದರಲ್ಲಿ ಲೋ ಬ್ಯಾಂಡ್‌, ಹೈ ಬ್ಯಾಂಡ್‌, ಮಿಡ್‌ ಬ್ಯಾಂಡ್‌ಗಳು ಇರುತ್ತವೆ.

   ಈ ಬಾರಿ ಸರ್ಕಾರ 74GHs  ಸ್ಪೆಕ್ಟ್ರಂನ್ನು ಹರಾಜು ಹಾಕಲಿದೆ. ಇದರಲ್ಲಿ ಲೋಬ್ಯಾಂಡ್‌ನಲ್ಲಿ (600 MHz, 700 MHz, 1800MHz, 2100MHz, 2300MHz), ಮಿಡ್‌ ಬ್ಯಾಂಡ್‌ನಲ್ಲಿ (3300 MHz), ಹೈ ಬ್ಯಾಂಡ್‌ನಲ್ಲಿ 26 GHz ಇರುತ್ತದೆ. ಜೂನ್‌ನಲ್ಲಿ ಸರ್ಕಾರ ಬಿಡುಗಡೆ ಮಾಡಿದ ಒಂದು ಪ್ರಕಟಣೆಯಲ್ಲಿ

5G ತಂತ್ರಜ್ಞಾನವನ್ನು ಆಧರಿಸಿ, ಟೆಲಿಕಾಂ ಕಂಪನಿಗಳು ಮಧ್ಯಮ ಮತ್ತು ಹೆಚ್ಚಿನ ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಬಳಸುವ ನಿರೀಕ್ಷೆಯಿದೆ. ಇದರ ವೇಗವು 4G ಗಿಂತ 10 ಪಟ್ಟು ಹೆಚ್ಚಾಗಿರುತ್ತದೆ.

ಇದರಿಂದ ಜನರಿಗೆ ಆಗುವ ಪ್ರಯೋಜನವೇನು?

ಹೆಸರೇ ಸೂಚಿಸುವಂತೆ, 5ಜಿ ಎಂಬುದು ಮೊಬೈಲ್ ನೆಟ್ ವರ್ಕ್ ಗಳಲ್ಲಿ ಐದನೇ ತಲೆಮಾರಿನ ನೆಟ್ ವರ್ಕ್ ಆಗಿದೆ. ಅಪ್ ಲೋಡ್ ಮತ್ತು ಡೌನ್ ಲೋಡ್ ಗಳ ವೇಗವು ಉತ್ತಮ ಆವರ್ತನದಲ್ಲಿ ಕೆಲಸ ಮಾಡುವುದರಿಂದ ಹೆಚ್ಚಾಗುವ ನಿರೀಕ್ಷೆಯಿದೆ. 3ಜಿಯಿಂದ 4ಜಿವರೆಗೆ, ಡೇಟಾ ವೇಗವು ಅಗಾಧವಾಗಿ ಹೆಚ್ಚಾಗಿದೆ ಎಂದು ನೀವು ನೋಡಬಹುದು. ಅದರ ನಂತರ ಆಪರೇಟರ್ ಗೆ ವೆಚ್ಚವು ಕಡಿಮೆಯಾಯಿತು. ಇದು ಡೇಟಾವನ್ನು ಅಗ್ಗವಾಗಿಸಿದೆ. ಈಗ ಅವರು ಇತರ ಅನೇಕ ಸೇವೆಗಳನ್ನು ಸಹ ನೀಡುತ್ತಾರೆ. 5ಜಿ ಇನ್ನೂ ಕೆಲವು ಸೇವೆಗಳು ಮತ್ತು ಮ್ಯಾಪಿಂಗ್ ಅಪ್ಲಿಕೇಶನ್‌ಗಳನ್ನು ಸುಧಾರಿಸುತ್ತದೆ.

Share Post