BengaluruCrime

ತಿಂಗಳಿಗೆ 70 ಅಬಾರ್ಷನ್‌ ಮಾಡುತ್ತಿದ್ದೆ; ಬಾಯ್ಬಿಟ್ಟ ನರ್ಸ್‌!

ಬೆಂಗಳೂರು; ಮೈಸೂರು ಭ್ರೂಣ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಈ ವೇಳೆ ಹಲವು ಆಘಾತಕಾರಿ ಅಂಶಗಳು ಹೊರಬೀಳುತ್ತಿವೆ. ಬಂಧಿತ ಮಾತಾ ಆಸ್ಪತ್ರೆ ಹೆಡ್‌ ನರ್ಸ್‌ ಮಂಜುಳಾ ಆಘಾತಕಾರಿ ವಿಚಾರವನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ತಿಂಗಳಿಗೆ ತಾನು 70 ಅಬಾರ್ಷನ್‌ ಮಾಡುತ್ತಿದೆ ಎಂದು ಹೇಳಿದ್ದಾರೆ.

ನಾನು ತಿಂಗಳಲ್ಲಿ ಕನಿಷ್ಠ 2 ಪ್ರಕರಣಗಳಲ್ಲಿ ಆರು ತಿಂಗಳ ಮಕ್ಕಳನ್ನು ಹೊರತೆಗೆದಿದ್ದೇನೆ ಎಂದೂ ಮಂಜುಳಾ ಹೇಳಿದ್ದಾಳೆ ಎನ್ನಲಾಗಿದೆ. ಆರು ತಿಂಗಳ ಮಗುವಿಗೆ ಜೀವವಿರುತ್ತಿತ್ತು. ಆದ್ರೆ ಧ್ವನಿ ಇನ್ನೂ ಬಂದಿರುವುದಿಲ್ಲ. ಆದ್ರೆ ಹೊರತೆಗೆದ ಕೆಲ ಸಮಯದಲ್ಲಿ ಅವು ಸಾಯುತ್ತಿದ್ದವು ಎಂದು ಮಂಜುಳಾ ಪೊಲೀಸರ ಮುಂದೆ ಹೇಳಿದ್ದಾಳೆ.

ಭ್ರೂಣಗಳನ್ನು ಪೇಪರ್‌ನಲ್ಲಿ ಸುತ್ತಿ ನಿಸಾರ್‌ಗೆ ಕೊಡುತ್ತಿದ್ದೆ. ನಿಸಾರ್ ಆ ಮಗುವನ್ನು ತೆಗೆದುಕೊಂಡು ಹೋಗಿ ಕಾವೇರಿ ನದಿಯಲ್ಲಿ ಎಸೆದು ಬರುತ್ತಿದ್ದ. ಇನ್ನು 12 ವಾರ ಕಳೆದ ಮಕ್ಕಳನ್ನು ಮೆಡಿಕಲ್ ವೇಸ್ಟ್‌ಗೆ ಹಾಕುತ್ತಿದ್ದೆವು ಎಂದೂ ಮಂಜುಳಾ ಹೇಳಿದ್ದಾಳೆ.

 

Share Post