Districts

ಮೋದಿ ಬಜೆಟ್‌ ಸಾಲದ ಬಜೆಟ್‌: ಸಿದ್ದರಾಮಯ್ಯ ವ್ಯಂಗ್ಯ

ಮೈಸೂರು: ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬಜೆಟ್‌ ಅನ್ನು ಸಾಲದ ಬಜೆಟ್‌ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಈ ಬಾರಿ 39,45ಲಕ್ಷ ಕೋಟಿ ಗಾತ್ರದ ಬಜೆಟ್‌ ಮಂಡಿಸಿದ್ದಾರೆ. ಕಳೆದ ಬಾರಿಗಿಂತ 4.61ಲಕ್ಷ ಕೋಟಿ ಹೆಚ್ಚಿನ ಗಾತ್ರದ ಬಜೆಟ್‌ ಇದಾಗಿದೆ. ಇದರಿಂದ ಬರೋಬ್ಬರಿ 11ಲಕ್ಷದ  87ಸಾವಿರದ 180ಕೋಟಿ ಸಾಲ ಹೆಚ್ಚಳವಾಗುತ್ತದೆ. ಕಳೆದ ವರ್ಷ 135ಲಕ್ಷ 87ಸಾವಿರ ಕೋಟಿ ಸಾಲವಿತ್ತು. 2022ರ ಮಾರ್‌ಚವರೆಗೆ 135.87ಲಕ್ಷ ಕೋಟಿ ಸಾಲವಿರುತ್ತೆ. ಡಾ.ಮನಮೋಹನ್‌ ಸಿಂಗ್‌ ಅವಧಿಯಲ್ಲಿ 53.11ಲಕ್ಷ ಕೋಟಿ ಸಾಲವಿತ್ತು8 ವರ್ಷದಲ್ಲಿ  93ಲಕ್ಷ ಕೋಟಿ ಸಾಲ ಹೆಚ್ಚು ಮಾಡಿದ್ದಾರೆ. ನರೇಂದ್ರ ಮೋದಿ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ. ಕೇಂದ್ರ ಬಜೆಟ್‌ನ ಬಹುಭಾಗ ಹಣ ಸಾಲ, ಬಡ್ಡಿ ಕಟ್ಟಲು ಹೋಗುತ್ತೆಉನ್ನತ ಶಿಕ್ಷಣ ಇಲಾಖೆಗೆ ಹೆಚ್ಚುವರಿಯಾಗಿ ಅನುದಾನ ನೀಡಿಲ್ಲ. ಮೋದಿ ಅವಧಿಯಲ್ಲಿ ದೇಶ ಸುಭಿಕ್ಷವಾಗಿದೆ ಎಂಬುದು ಸುಳ್ಳು.

ರಸಗೊಬ್ಬರಕ್ಕೆ ನೀಡುತ್ತಿದ್ದ ಸಬ್ಸಿಡಿ ಕಡಿಮೆ ಮಾಡಿದ್ದಾರೆ. 2020-21ರಲ್ಲಿ 1,28,740 ಕೋಟಿ ಹಣ ಸಬ್ಸಿಡಿ ನೀಡಿದ್ರು.  2020-22ರಲ್ಲಿ 1,40,258 ಕೋಟಿ ನೀಡಿದ್ರು. ಈ ಬಾರಿ 1,05,262ಕೋಟಿ ಮಾತ್ರ ನೀಡಿದ್ದಾರೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ 35ಕೋಟಿ ರೂಪಾಯಿ ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಇದರಿಂದ ರಸಗೊಬ್ಬರ ಏರಿಕೆಯಾಗುವ ಸಾಧ್ಯತೆಯಿದೆ. ಮಹದಾಯಿ ಬಗ್ಗೆ ಯಾರನ್ನೂ ಕರೆದು ಮಾತನಾಡಿಲ್ಲ, ಮೇಕೆದಾಟು ಯೋಜನೆ ಬಗ್ಗೆ ಅನುಮತಿ ಕೊಡಿಸಲು ಆಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಕರಣಗೊಳಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ರೂ ಈದುವರೆಗೆ ಸ್ಪಂದಿಸಿಲ್ಲ. ಆದ್ರೆ ಇದೆಲ್ಲವನ್ನು ಬಿಟ್ಟು ನದಿ ಜೋಡಣೆ ಮಾಡ್ತೇವೆ ಅಂತಿದಾರೆ. ಮುಂದಿನ 25ವರ್ಷಕ್ಕೆ ಬಜೆಟ್‌ ಅಂತಿದಾರೆ, ಹಾಗಾದ್ರೆ ಅಲ್ಲಿವರೆಗೂ ಇವರೇ ಅಧಿಕಾರದಲ್ಲಿರ್ತಾರಾ..? ಇದು ದೇಶವನ್ನು ಉದ್ಧಾರ ಮಾಡುವ ಬಜೆಟ್‌ ಅಲ್ಲ, ವಿನಾಶ ಮಾಡುವ ಬಿಜೆಟ್‌. ಜನರ ನಂಬಿಕೆಗೆ ದ್ರೋಹ ಮಾಡುವ ಬಜೆಟ್‌ ಆಗಿದೆ.

ಚುನಾವಣೆ ನಡೆಯುವ ರಾಜ್ಯಗಳಿಗೆ ಯಾವುದೇ ಯೋಜನೆ ಇಲ್ಲ, ರಾಜ್ಯಕ್ಕೂ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಕೇಂದ್ರ ಸರ್ಕಾರದ ಮೇಲಿದ್ದ ಜನರ ಭರವಸೆ ಹುಸಿಯಾಗಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಇದು ನಿರಾಶಾದಾಯಕ ಬಜೆಟ್‌. 25ಸಂಸದರಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ರಾಜ್ಯದ ಪಾಲಿನ ಜಿಎಸ್‌ಟಿ ಹಣವನ್ನೂ ನೀಡಿಲ್ಲ, ಹಣ ನೀಡದಿದ್ರೆ ಪರಿಸ್ಥಿತಿ ಬಿಗಡಾಯಿಸಲಿದೆ. ಮೋದಿ ಮುಂದೆ ರಾಜ್ಯ ಸಂಸದರು ಹೇಡಿಗಳಂತೆ ವರ್ತಿಸುತ್ತಾರೆ. ರಾಜ್ಯದ ಪಾಲಿನ ಹಣ ಕೇಳುವುದಕ್ಕೂ ಸಂಸದರಿಗೆ ತಾಕತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

Share Post