ಫೆ 8 ರಿಂದ ಸಿದ್ದಗಂಗಾ ಮಠದ ಜಾತ್ರೆ: ಈ ಬಾರಿ ಜಾನುವಾರು ಜಾತ್ರೆ ಇಲ್ಲ
ತುಮಕೂರು; ಪ್ರಸಿದ್ದ ಸಿದ್ದಗಂಗೆಯ ಸಿದ್ದೇಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.8. ರಿಂದ 22 ರವರೆಗೆ ನಡೆಯಲಿದೆ. ಈ ಭಾರಿ ರಾಸುಗಳ ಪರಿಷೆ ಇರುವುದಿಲ್ಲ,ಇದು ರೈತರಿಗೆ ನಿರಾಸೆ ಮೂಡಿಸಿದೆ.
ಮಹಾಶಿವರಾತ್ರಿ ಸಂದರ್ಭದಲದಲ್ಲಿ ನಡೆಯುವ ಸುಪ್ರಸಿದ್ದ ಸಿದ್ದಗಂಗಾ ಮಠದ ಜಾತ್ರೆ ಫೆ. 8 ರಿಂದ 22 ರವರೆಗೆ ನಡೆಯಲಿದೆ. 14 ದಿನಗಳ ಕಾಲ ನಡೆಯಲಿರುವ ಜಾತ್ರೆಯಲ್ಲಿ ಮಹಾ ರಥೋತ್ಸವ, ದನಗಳ ಪರಿಷೆ,ಬೆಳ್ಳಿ ಪಲ್ಲಕ್ಕಿ, ಕೃಷಿ ವಸ್ತುಪ್ರದರ್ಶನ ಪ್ರಮುಖ ಆಕರ್ಷಣೆ ಯಾಗಿರುತ್ತದೆ. ರಾಸುಗಳಿಗೆ ಚರ್ಮಗಂಟು ರೋಗ ಭಾದಿಸುತ್ತಿರುವುದರಿಂದ ಈ ಭಾರಿ ಜಾನುವಾರು ಜಾತ್ರೆ ರದ್ದು ಮಾಡಲಾಗಿದೆ, ಇದು ರೈತರಿಗೆ ನಿರಾಸೆ ಮೂಡಿಸಿದೆ.
ಫೆ.12ರಿಂದ 21 ರ ವರೆಗೆ ವಿವಿಧ ವಾಹನಗಳಲ್ಲಿ ಸಿದ್ದಲಿಂಗೇಶ್ವರ ಸ್ವಾಮಿಯವರ ಉತ್ಸವ ನಡೆಯಲಿದೆ. ಮಹಾಶಿವರಾತ್ರಿಯ ದಿನದಂದು ಬೆಳ್ಳಿರಥೋತ್ಸವ ಹಾಗೂ ವಿಶೇಷವಾದ ಪೂಜಾ ಕೈಂಕರ್ಯಗಳು ಮಠದಲ್ಲಿ ನಡೆಯಲಿವೆ. ಮರುದಿನ 19 ರಂದು ಸ್ವಾಮಿಯ ಮಹಾರಥೋತ್ಸವ ಜರುಗಲಿದೆ. ರಥೋತ್ಸವಕ್ಕೆ ನಾಡಿನ ಮೂಲೆ ಮೂಲೆಯಿಂದ ಸಹಸ್ರಾರು ಭಕ್ತಾಧಿಗಳು ಪಾಲ್ಗೊಳ್ಳುತ್ತಾರೆ.
59 ವರ್ಷಗಳಿಂದ ರೈತರಿಗಾಗಿ ಕೃಷಿ ವಸ್ತುಪ್ರದರ್ಶನ;
ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ರೈತರ ಮೇಲೆ ಅಪಾರವಾದ ಕಾಳಜಿಯನ್ನಿಟ್ಟುಕೊಂಡು ಈ ಭಾಗದ ರೈತರಿಗೆ ವಿವಿಧ ಕೃಷಿ ಚಟುವಟಿಕೆಗಳ ಕುರಿತು ಅರಿವು ಮೂಡಿಸುವ ದೃಷ್ಟಿ ಯಿಂದ ಕೃಷಿ ವಸ್ತು ಪ್ರದರ್ಶನ ಮೇಳವನ್ನ ನಡೆಸಲಾಗುತ್ತಿದೆ. 59 ಗಳಿಂದ ಕೃಷಿ ವಸ್ತು ಪ್ರದರ್ಶನ ನಡೆಯುತ್ತಿದ್ದು ಈ ಭಾರಿ ಜಾತ್ರೆ ಆರಂಭದಿಂದ ಕೊನೆಯವರೆಗೂ ವಸ್ತು ಪ್ರದರ್ಶನವಿರುತ್ತದೆ. ಪ್ರದರ್ಶನದಲ್ಲಿ ಕೃಷಿಗೆ ಅಗತ್ಯವಾದ ಆದನಿಕ ಸಲಕರಣೆ, ಕೃಷಿ ಚಟುವಟಿಕೆಗೆ ಸಂಭಂದಿಸಿದ ವಸ್ತುಗಳ ಪ್ರದರ್ಶನ ಮಾರಾಟ ವಿರುತ್ತದೆ. ಜೊತೆಗೆ ಸರ್ಕಾರದಿಂದ ಸಿಗುವ ಕೃಷಿ ಸೌಲಭ್ಯಗಳನ್ನ ರೈತರಿಗೆ ಪರಿಚಯಿಸಲಾಗುತ್ತದೆ.