BengaluruCrime

ಯುವತಿಯರನ್ನ ಪಾರ್ಟಿಗೆ ಕರೆದು ಅತ್ಯಾಚಾರಕ್ಕೆ ಯತ್ನಿಸಿದ ಗೆಳೆಯರು

ಬೆಂಗಳೂರು; ಇತ್ತೀಚಿನ ದಿನಗಳಲ್ಲಿ ಯುವತಿಯರು ಪಾರ್ಟಿ, ಪಬ್ ಎಂದು ಗೆಳೆಯರ ಜೊತೆ ಮೋಜು, ಮಸ್ತಿ ಮಾಡಲು ಹಗಲು ರಾತ್ರಿಯೆನ್ನದೆ ಕರೆದಲ್ಲೆಲ್ಲಾ ತೆರಳುತ್ತಾರೆ‌‌. ಹೀಗೆ ಗೆಳತಿಯರನ್ನ ಪಾರ್ಟಿಗೆ ಕರೆದು ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಾರ್ಟಿ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರು ಯುವಕರನ್ನ ಬೆಂಗಳೂರು ಪೊಲೀಸರು ಬಂದಿಸಿದ್ದಾರೆ.

ಕಾಶ್ಮೀರ ಮೂಲದ ಯುವತಿ ಹಾಗೂ ಮತ್ತೊಬ್ಬ ಸ್ನೇಹಿತೆಯನ್ನ ಯುವಕರು( ಗೆಳೆಯರು) ಪಾರ್ಟಿಗೆ ಆಹ್ವಾನಿಸಿದ್ದಾರೆ. ಪಾರ್ಟಿಯಲ್ಲಿ ಪಾನಮತ್ತರಾಗಿದ್ದ ಇಬ್ಬರು ಯುವತಿಯರ ಮೇಲೆ ಯುವಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಯುವಕರಿಂದ ತಪ್ಪಿಸಿಕೊಳ್ಳಲು ಬಾತ್ ರೂಂ ನಲ್ಲಿ ಬಂದಿಯಾಗಿದ್ದರು ಎಂದು ವಿಚಾರಣೆ ವೇಳೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

Share Post