BengaluruCrime

ದಂಡ ವಸೂಲಿ ಭರದಲ್ಲಿ ಮಾನವೀಯತೆ ಮರೆತ ಸಂಚಾರಿ ಪೊಲೀಸರು

ಬೆಂಗಳೂರು; ಜಯನಗರ ಸಂಚಾರಿ ಪೊಲೀಸರ ಮೇಲೆ ವೃದ್ದ ದಂಪತಿಗೆ ಕಿರುಕುಳ ಆರೋಪ ಕೇಳಿಬಂದಿದೆ. ಆಸ್ಪತ್ರೆಗೆ ತೆರಳುತ್ತಿದ್ದ ವೃದ್ದ ದಂಪತಿ ತಡೆದು ಕಿರುಕುಳ ನೀಡಿದ್ದಾರೆ.ಜೆಪಿ ನಗರದ ನಿವಾಸಿಗಳಾಗಿದ್ದ ಮಂಗಳ ಹಾಗೂ ಮಲ್ಲೇಶ್ ದಂಪತಿ ಕಳೆದ 2 ತಾರೀಖು ಆಸ್ಪತ್ರೆ ತೆರಳುತ್ತಿದ್ದ ವೇಳೆ ಪೋಲೀಸರು ಕಿರುಕುಳ ನೀಡಿದ್ದಾರೆ ಎಂದು ವೃದ್ದ ದಂಪತಿ ಮಗ ಆರೋಪ ಮಾಡಿದ್ದಾನೆ.

45 ವರ್ಷದ ಮಂಗಳ ಎಂಬುವವರಿಗೆ ಸಕ್ಕರೆ ಖಾಯಿಲೆ ಹಾಗೂ ಬಿಪಿಯಿಂದ ಬಳಲುತ್ತಿದ್ದರು, ದ್ವಿಚಕ್ರವಾನಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಸಂಗಂ ಸರ್ಕಲ್ ನಲ್ಲಿ ಜಯನಗರ ಸಂಚಾರಿ ಪೊಲೀಸರು ಬೈಕ್ ತಡೆದಿದ್ದಾರೆ. ತಡೆದು ವಾಹನದ ಮೇಲಿರುವ 5 ಸಾವಿರ ದಂಡ ಪಾವತಿಸಲು ಒತ್ತಾಯ ಮಾಡಿದ್ದಾರೆ. ಆದ್ರೆ ವೃದ್ದ ದಂಪತಿಯ ಬಳಿ ಕೇವಲ 2 ಸಾವಿರ ಮಾತ್ರ ಹಣವಿದ್ದು ಅಷ್ಟು ಮಾತ್ರ ಕಟ್ಟೋದಾಗಿ ಹೇಳಿದ್ದಾರೆ.

ಆದರೆ ಸಂಚಾರಿ ಪೊಲೀಸ್ ಶಿವಸ್ವಾಮಿ ಎಂಬ ಅಧಿಕಾರಿ 5 ಸಾವಿರ ಕಟ್ಟಲೇಬೇಕೇಂದು ಒತ್ತಾಯಮಾಡಿದ್ದಾನೆ ಅಲ್ಲದೇ ಅವಾಚ್ಯ ಶಬ್ದಗಳಿಂದ ವೃದ್ದ ದಂಪತಿಗಳನ್ನ ನಿಂದಿಸಿದ್ದಾನೆ,ಇದರಿಂದಾಗಿ ವಿಚಲಿತರಾದ ಮಲ್ಲೇಶ್ 2 ಕಿಲೋಮೀಟರ್ ನಡೆದೆ ಮನೆಗೆ ತೆರಳಿ ಹಣ ತಂದು ದಂಡ ಕಟ್ಟಿದ್ದಾರೆ.ಮಲ್ಲೇಶ್‌ ರವರು ಹಣ ತರಲು ತೆರಳಿದಾಗ.ಪತ್ನಿ ರಸ್ತೆಯಲ್ಲೇ ಕುಳಿತಿದ್ದಾರೆ ಖಾಯಿಲೆಯಿಂದ ಬಳಲುತ್ತಿದ್ದರಿಂದ ಅವರು ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ.ಸದ್ಯ ವೃದ್ದ ದಂಪತಿಯ ಮಗ ಸಂಚಾರಿ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ದೂರುನೀಡಿದ್ದಾನೆ.ಬೆಂಗಳೂರಿನ ಸಂಚಾರಿ ಪೊಲೀಸ್ ಟ್ವಿಟರ್ ಪೇಜ್ ನಲ್ಲಿ ಪೋಸ್ಟ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Share Post