CinemaDistricts

ಗೇಮ್‌ ಚೇಂಜರ್‌ ಚಿತ್ರದ ಶೂಟಿಂಗ್‌; ಮೈಸೂರಿಗೆ ಬಂದಿಳಿದ ತೆಲುಗು ನಟ ರಾಮ್‌ ಚರಣ್‌

ಮೈಸೂರು; ತೆಲುಗಿನ ಮೆಗಾಸ್ಟಾರ್‌ ಚಿರಂಜೀವಿ ಪುತ್ರ ಹಾಗೂ ಖ್ಯಾತ ನಟ ರಾಮ್‌ಚರಣ್‌ ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರಿನಲ್ಲಿ ರಾಮ್‌ಚರಣ್‌ ಹಾಗೂ ಕಿಯಾರಾ ಅಡ್ವಾಣಿ ನಟಿಸುತ್ತಿರುವ ಘೇಮ್‌ ಚೇಂಜರ್‌ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಳ್ಳಲು ಅವರು ಮೈಸೂರಿಗೆ ಬಂದಿದ್ದಾರೆ. ಖಾಸಗಿ ಜೆಟ್‌ನಲ್ಲಿ ಅವರು ಹೈದರಾಬಾದ್‌ನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. 

ಹಲವು ಹಿಟ್‌ ಚಿತ್ರಗಳನ್ನು ನೀಡಿರುವ ರಾಮ್‌ ಚರಣ್‌ ತೆಲುಗಿನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಹೀಗಾಗಿ, ಗೇಮ್‌ ಚೇಂಜರ್‌ ಚಿತ್ರದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇದೆ. ಇನ್ನೂ ಚಿತ್ರೀಕರಣ ನಡೆಯುತ್ತಿರುವಾಗಲೇ ಈ ಸಿನಿಮಾದ ಒಂದು ಹಾಡು ಸೋರಿಕೆಯಾಗಿತ್ತು. ಹೀಗಾಗಿ, ಚಿತ್ರತಂಡ ಅತ್ಯಂತ ಎಚ್ಚರಿಕೆಯಿಂದ ಚಿತ್ರೀಕರಣ ಮಾಡುತ್ತಿದೆ.

ತೆಲುಗಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಿನ ಚಿತ್ರಗಳು ರಿಲೀಸ್‌ ಆಗುತ್ತವೆ. ಅದರಲ್ಲೂ ಸ್ಟಾರ್‌ಗಳ ಚಿತ್ರಗಳು ಈ ದಿನ ರಿಲೀಸ್‌ ಆಗುತ್ತವೆ. ಅದರಂತೆ ಗೇಮ್‌ ಚೇಂಜರ್‌ ಕೂಡಾ ಸಂಕ್ರಾಂತಿಗೆ ರಿಲೀಸ್‌ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

 

Share Post