CrimeDistricts

ಬೈಕ್‌ಗೆ ಸಾರಿಗೆ ಬಸ್‌ ಡಿಕ್ಕಿ; ಬೈಕ್‌ ಸವಾರರಿಬ್ಬರೂ ಸ್ಥಳದಲ್ಲೇ ದುರ್ಮರಣ!

ಕಲಬುರಗಿ; ಇಲ್ಲಿನ ಆಳಂದ- ಹಿರೊಳ್ಳಿ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸರ್ಕಾರಿ ಬಸ್‌ ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್‌ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೈಕ್‌ನಲ್ಲಿದ್ದವರು ಆಳಂದಿಂದ ಹಿರೊಳ್ಳಿಗೆ ಹೋಗುತ್ತಿದ್ದರು. ಈ ವೇಳೆ ಎದುರಿಗೆ ಬಂದ ಸರ್ಕಾರಿ ಬಸ್‌ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಲವತ್ತು ವರ್ಷದ ಸಿದ್ದಲಿಂಗಯ್ಯ ಹಿರೇಮಠ್‌ ಹಾಗೂ ಅವರ ಸಹೋದರನ ಮಗ 8 ವರ್ಷ ಸಂಕೇತ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ನಾಗಮ್ಮ ಹಾಗೂ ಅಂಕಿತಾ ಎಂಬುವವರಿಗೂ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಆಳಂದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

 

Share Post