ಸೆಕ್ಯುಲರಿಸಂ ನಮ್ಮ ರಕ್ತದಲ್ಲಿದೆ-ಸಂವಿಧಾನ ಒಪ್ಪಲ್ಲ ಎನ್ನುವವರಿಗೆ ಪಾಠ ಮಾಡಿ: ಆರಗ ಜ್ಞಾನೇಂದ್ರ
ಕೊಪ್ಪಳ: ಹಿಜಾಬ್ ವಿಚಾರವಾಗಿ ನ್ಯಾಯಾಲಯದ ತೀರ್ಪು ಒಪ್ಪದೇ ಮಾತನಾಡುವವರು ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಗುಡುಗಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ಸೆಕ್ಯುಲರಿಸಂ ನಮ್ಮ ರಕ್ತದಲ್ಲಿ ಬಂದಿದೆ. ಸಂವಿಧಾನ ನ್ಯಾಯಾಲಯದ ತೀರ್ಪುಗಳನ್ನು ನಾವು ಒಪ್ಪಲ್ಲ ಎನ್ನುವವರಿಗೆ ಪಾಠ ಮಾಡಬೇಕಿದೆ. ರಾಜಕಾರಣಗಳಿಂತೂ ವೋಟ್ ಬ್ಯಾಂಕ್ಗೋಸ್ಕರ ಮಾತನಾಡುತ್ತಾರೆ. ಉಳಿದವರಿಗೆ ಮಾತನಾಡುವುದಕ್ಕೆ ಏನ್ ತೆವಲು ಎಂದು ಬಿದ್ದಿಜೀವಿಗಳ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.
ಹಲಾಲ್ ಕಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಹಲಾಲ್ ಕಟ್ ಧಾರ್ಮಿಕ, ಭಾವನಾತ್ಮಕ ವಿಷಯವಾಗಿದೆ. ಇದರಲ್ಲಿ ಲಾ ಅಂಡ್ ಆರ್ಡರ್ ಪ್ರಾಬ್ಲಮ್ ಇದೆ. ಈ ಬಗ್ಗೆ ನಾವು ಹ್ಯಾಂಡಲ್ ಮಾಡುತ್ತೇವೆ ಎಂಬ ಮಾತನ್ನು ಗೃಹ ಸಚಿವರು ಹೇಳಿದ್ರು.