Bengaluru

KGF-2 ಸಿನಿಮಾಗೆ U/A ಸರ್ಟಿಫಿಕೇಟ್‌; 2 ಗಂಟೆ 48 ನಿಮಿಷದ ಸಿನಿಮಾ ವಿಶೇಷತೆ ಏನು..?

ಬೆಂಗಳೂರು: KGF ಚಾಪ್ಟರ್‌ 1 ಪಾನ್‌ ಇಂಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಸಿನಿಮಾದ ನಿರ್ದೇಶಕ ಪ್ರಶಾಂತ್‌ ನೀಲ್‌ ಹಾಗೂ ಹೀರೋ ಯಶ್‌ ಪಾನ್‌ ಇಂಡಿಯಾ ಕ್ರೇಜ್‌ ದಕ್ಕಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿರೋದೇ. ಈಗ ಪಾನ್‌ ಇಂಡಿಯಾ ಲೆವೆಲ್‌ನಲ್ಲಿ KGF ಚಾಪ್ಟರ್‌ 2 ಭಾರಿ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ರವೀನಾ ಟಂಡನ್‌, ಸಂಜಯ್‌ ದತ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ನಟ ರಾವು ರಮೇಶ್‌ ಕೂಡಾ ಪ್ರಧಾನ ಪ್ರಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 

ಕೊರೋನಾ ಕಾರಣದಿಂದಾಗಿ ಹಲವು ಬಾರಿ ರಿಲೀಸ್‌ ಡೇಟ್‌ಗಳನ್ನು ಬದಲಾಯಿಸಲಾಗಿತ್ತು. ಈಗ ಕೊನೆಗೂ KGF – 2 ರಿಲೀಸ್‌ಗೆ ರೆಡಿಯಾಗಿದೆ. ಏಪ್ರಿಲ್‌ 24 ರಂದು ಪ್ರಪಂಚದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ ಯೂಟ್ಯೂಬ್‌ನ್ನು ಶೇಕ್‌ ಮಾಡಿದೆ. ಎಲ್ಲಾ ಭಾಷೆಗಳಲ್ಲೂ ಸೇರಿ 24 ಗಂಟೆಗಳಲ್ಲಿ 110 ಮಿಲಿಯನ್‌ ವಿವ್ಯೂಸ್‌ ಬಂದಿದೆ. ಈ ಮೂಲಕ ಭಾರತ ಸಿನಿಮಾ ಇತಿಹಾಸದಲ್ಲಿ ಹೊಸದೊಂದು ರೆಕಾರ್ಡ್‌ ಸೃಷ್ಟಿ ಮಾಡಿದೆ.

ಇದೀಗ ಸಿನಿಮಾ ರನ್‌ಟೈಮ್‌ ಮತ್ತು ಸೆನ್ಸಾರ್‌ ರಿಪೋರ್ಟ್‌ ಹೊರಬಂದಿದೆ. KGF -2 ಸಿನಿಮಾ ಒಟ್ಟು 2 ಗಂಟೆ 48 ನಿಮಿಷದ ರನ್‌ ಟೈಮ್‌ ಇದೆ. ಸೆನ್ಸಾರ್‌ ಬೋರ್ಡ್‌ ಈ ಸಿನಿಮಾಗೆ U/A ಸರ್ಟಿಫಿಕೇಟ್‌ ನೀಡಿದೆ. ಇನ್ನು KGF-2 ಸಿನಿಮಾವನ್ನು ಭಾರತದ ಬಹುತೇಕ ಭಾಷೆಗಳಲ್ಲದೆ ಇಂಗ್ಲೀಷ್‌ ಭಾಷೆಯಲ್ಲೂ ಬಿಡುಗಡೆ ಮಾಡುತ್ತಿರುವುದು ವಿಶೇಷದ ಸಂಗತಿ.

Share Post