DistrictsPolitics

ಹಿಂದೂ ಪದದ ಅರ್ಥ ವಿವಾದ; ಕೊನೆಗೂ ಹೇಳಿಕೆ ಹಿಂಪಡೆದ ರಮೇಶ್‌ ಜಾರಕಿಹೊಳಿ

ಬೆಳಗಾವಿ; ಪರ್ಷಿಯನ್‌ ಭಾಷೆಯಲ್ಲಿ ಹಿಂದೂ ಎಂಬ ಪದಕ್ಕೆ ಅಶ್ಲೀಲ ಅರ್ಥವಿದೆ ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ಕೊನೆಗೂ ತಮ್ಮ ಹೇಳಿಕೆ ಹಿಂದಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.

ಹಿಂದೂ ಪದದ ಅರ್ಥದ ಕುರಿತು ನಾನು ನೀಡಿರುವ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಕಾರಣದಿಂದಾಗಿ ಜನರಲ್ಲಿ ಗೊಂದಲ ಸೃಷ್ಟಿಯಾಗ್ಬಾರ್ದು ಎಂದು ನನ್ನ ಹೇಳಿಕೆ ಹಿಂಪಡೆಯುತ್ತಿದ್ದೇನೆ ಎಂದು ಸತೀಶ್‌ ಜಾರಕಿಹೊಳಿ ಪತ್ರದಲ್ಲಿ ತಿಳಿಸಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದೂ ಬರೆದುಕೊಂಡಿದ್ದಾರೆ.

ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೊರಟಿದ್ದು, ಈ ಮೂಲಕ ನನ್ನ ತೇಜೋವಧೆ ಮಾಡುವ ಪಿತೂರಿ ನಡೆದಿದೆ ಎಂದು ಜಾರಕಿಹೊಳಿ ಆರೋಪ ಮಾಡಿದ್ದಾರೆ. ಹಿಂದೂ ಎಂಬ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದ್ದು, ಈ ಪದ ಭಾರತಕ್ಕೆ ಹೇಗೆ ಬಂತು? ಎಂದು ನಾನು ಪ್ರಶ್ನಿಸಿದ್ದೇನೆ. ಹಲವಾರು ಲೇಖನಗಳಲ್ಲಿ ಹಿಂದೂ ಪದದ ಬಗ್ಗೆ ಕೆಟ್ಟ ಅರ್ಥಗಳಿವೆ ಎಂಬುದಾಗಿ ಬರೆದಿದ್ದಾರೆ ಎಂದು ನಾನು ಹೇಳಿಕೆ ನೀಡಿದ್ದೆ. ಪುಸ್ತಕಗಳು, ಶಬ್ದಕೋಶ ಮತ್ತು ಇತಿಹಾಸಕಾರರ ಬರಹದ ಉಲ್ಲೇಖ ಇಟ್ಟುಕೊಂಡು ನಾನು ಭಾಷಣ ಮಾಡಿದ್ದೆ ಎಂತಲೂ ಜಾರಕಿಹೊಳಿ ಹೇಳಿದ್ದಾರೆ.

Share Post