ಮಹಿಳಾ ಪಿಎಸ್ಐ ಜೊತೆ ಅಸಭ್ಯ ವರ್ತನೆ; ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನ ಬಂಧನ
ತುಮಕೂರು; ಪೊಲೀಸ್ ಠಾಣೆಗೆ ನುಗ್ಗಿ ಮಹಿಳಾ ಪಿಎಸ್ಐ ಜೊತೆ ಅಸಭ್ಯವಾಗಿ ವರ್ತನೆ ಮಾಡಿ ಬೆದರಿಕೆ ಹಾಕಿದ್ದಲ್ಲದೆ ಬಂಧಿತ ಆರೋಪಿಗಳನ್ನ ಕರೆದೊಯ್ದಿರುವ ಆರೋಪದ ಮೇಲೆ ತುಮಕೂರು ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಶಶಿ ಹುಲಿಕುಂಟೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ವಿರುದ್ಧ ಪೇ ಎಂ ಎಲ್ ಎ ಪೋಸ್ಟರ್ಗಳನ್ನು ಅಂಟಿಸಿರುವ ಅರೋಪದ ಮೇಲೆ ತಿಲಕ್ ಪಾರ್ಕ್ ಪೊಲೀಸರು ಶಿವ, ಉದಯ್ ಕುಮಾರ್, ಪಾರ್ಥಸಾರಥಿ, ವರುಣ್ ಎಂಬ ನಾಲ್ವರು ಆರೋಪಿಗಳನ್ನ ಬಂಧಿಸಿದ್ದರು. ಶಶಿ ಹುಲಿಕುಂಟೆ ಆತನ ಸ್ನೇಹಿತ ಅಜ್ಜು@ಅಜರ್ ಇಬ್ಬರು ಶನಿವಾರ ರಾತ್ರಿ ಠಾಣೆಗೆ ತೆರಳಿ ಬಂಧಿತ ಆರೋಪಿಗಳೆಲ್ಲಾ ನಮ್ಮವರೇ ಅವರನ್ನ ಕೂಡಲೇ ಬಿಡುಗಡೆ ಮಾಡಿ ಎಂದು ಮಹಿಳಾ ಪಿ ಎಸ್ ಐ ರತ್ನಮ್ಮ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂಧಿಸಿ, ಇನ್ನೂ ಮೂರು ತಿಂಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಆವಾಗ ನಾನು ನಿಮ್ಮನ್ನು ನೋಡಿಕೊಳ್ತೆನೆ, ನಮ್ಮ ಹುಡುಗರನ್ನ ಕರೆತಂದು ಠಾಣೆ ಮುಂದೆ ಮುತ್ತಿಗೆ ಹಾಕಿಸಿ ಪ್ರತಿಭಟನೆ ಮಾಡುತ್ತೇನೆ ಎಂದು ದಮ್ಕಿ ಹಾಕಿದ್ದಾರೆ ಎಂದು ಪಿ ಎಸ್ ಐ ರತ್ನಮ್ಮ ಆರೋಪಿಸಿದ್ದಾರೆ.
ಬಳಿಕ ಠಾಣೆಯಲ್ಲಿದ್ದ ಸಿಬ್ಬಂಧಿ ಸಿದ್ದಯ್ಯ ಎಂಬುವರನ್ನ ಬೆದರಿಸಿ ಬಂಧಿತ ಆರೋಪಿಗಳನ್ನ ಕರೆದೊಯ್ದಿದ್ದಾರೆ ಎಂದು ಪಿಎಸ್ ಐ ರತ್ನಮ್ಮ ಆರೋಪಿಸಿದ್ದಾರೆ. ಈ ಕುರಿತು ರತ್ನಮ್ಮ ಹಾಗೂ ಠಾಣಾ ಸಿಬ್ಬಂದಿ ಸಿದ್ದಯ್ಯ ಎಂಬುವರು ಶಶಿ ಹುಲಿಕುಂಟೆ ಹಾಗೂ ಅಜರ್ ವಿರುದ್ದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿ ಹುಲಿಕುಟೆ ಹಾಗೂ ಶತನ ಸ್ನೆಹಿತ ಅಜರ್ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.