Districts

ಜಿಟಿಜಿಟಿ ಮಳೆಯಿಂದ ಕಾಣದ ರಸ್ತೆ; ಅಪಘಾತದಲ್ಲಿ ಓರ್ವ ಸಾವು

ಮಡಿಕೇರಿ; ಜಿಟಿಜಿಟಿ ಮಳೆಯಿಂದಾಗಿ ಮಂಜು ಕವಿದ ವಾತಾವರಣದಿಂದಾ ರಸ್ತೆ ಕಾಣಿಸದೇ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದಿರೋದು ಮಡಿಕೇರಿಯ ಕುಶಾಲನಗರ ತಾಲ್ಲೂಕಿನ ಕೊಡಗರಹಳ್ಳಿಯಲ್ಲಿ.  

ಸುಂಟಿಕೊಪ್ಪ ಪನ್ಯದ ಆನಂದ ಬಸಪ್ಪ ತೋಟದ ವ್ಯವಸ್ಥಾಪಕ ಜಾವಮನೆ ಮುಸ್ತಾಫ (47) ಎಂಬವರೇ ಮೃತಪಟ್ಟವರು. ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ಇನ್ನೋವಾ ಕಾರು ಹಾಗೂ ಕುಶಾಲನಗರದಿಂದ ಸುಂಟಿಕೊಪ್ಪ ಕಡೆಗೆ ಬರುತ್ತಿದ್ದ ಎಕ್ಸ್-ಯುವಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ.

ಅಪಘಾತದ ರಭಸಕ್ಕೆ ಎರಡೂ ಕಾರುಗಳು ಬಹುತೇಕ ಜಖಂಗೊಂಡಿವೆ. ಇನ್ನೋವಾ ಕಾರಿನಲ್ಲಿದ್ದ ಜಾವಮನೆ ಮುಸ್ತಫಾ ಅವರ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ.

 

Share Post