Districts

ಬೆಂಗಳೂರಿನತ್ತ ಹೊರಟ ಸಚಿವ ಈಶ್ವರಪ್ಪ; ಕಣ್ಣೀರು ಹಾಕಿದ ಮಹಿಳಾ ಕಾರ್ಯಕರ್ತೆಯರು

ಶಿವಮೊಗ್ಗ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವ ಈಶ್ವರಪ್ಪ ಅವರು ಶಿವಮೊಗ್ಗದಿಂದ ಬೆಂಗಳೂರಿನತ್ತ ಹೊರಟರು. ರಸ್ತೆ ಮಾರ್ಗವಾಗಿ ಅವರು ಹೊರಟಿದ್ದು, ಅವರೊಂದಿಗೆ ಐವತ್ತಕ್ಕೂ ಹೆಚ್ಚು ಕಾರುಗಳಲ್ಲಿ ಬೆಂಬಲಿಗರೂ ಹಿಂಬಾಲಿಸಿದ್ದಾರೆ. ಇನ್ನು ಹೊರಡುವಾಗ, ರಾಜೀನಾಮೆ ನೀಡಬೇಡಿ ಎಂದು ಬೆಂಬಲಿಗರು ಮನವಿ ಮಾಡಿದ್ದಾರೆ. ಮಹಿಳಾ ಕಾರ್ಯಕರ್ತೆಯರು ಕಣ್ಣೀರು ಹಾಕಿದ ಘಟನೆಯೂ ನಡೆದಿದೆ. 

  ಈ ವೇಳೆ ಮಾತನಾಡಿರುವ ಈಶ್ವರಪ್ಪ, ನನಗೆ ಇದು ಅಗ್ನಿ ಪರೀಕ್ಷೆ. ಇದರಲ್ಲಿ ನಾನು ಗೆದ್ದು ಬರುವೆ. ನನ್ನ ಬಗ್ಗೆ ತಿಳಿದಿರುವ ಎಲ್ಲರೂ ನನಗೆ ವಿಶ್ವಾಸ ತುಂಬುತ್ತಿದ್ದಾರೆ. ನೀವು ಗೆದ್ದು ಬರುತ್ತೀರಿ ಎನ್ನುತ್ತಿದ್ದಾರೆ. ನಾನು ಹೀಗೆ ನನಗೆ ಅಗ್ನಿಪರೀಕ್ಷೆ ಬರುತ್ತದೆ ಎಂದು ತಿಳಿದುಕೊಂಡಿರಲಿಲ್ಲ. ಆದರೆ, ಜನರೇ ಬಂದು ನನ್ನನ್ನು ಮಾತನಾಡಿಸುತ್ತಿರುವುದು ಧೈರ್ಯ ತಂದಿದೆ ಎಂದು ಹೇಳಿದರು.

Share Post