ಗಣರಾಜ್ಯೋತ್ಸವ ದಿನದಂದು ಎಡವಟ್ಟು: ಧ್ವಜ ಹಾರದೆ ವಿಚಲಿತರಾದ ಎಂಟಿಬಿ
ಚಿಕ್ಕಬಳ್ಳಾಪುರ: 73ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸುವಾಗ ಧ್ವಜ ಹಾರದೆ ಕೆಲ ಕಾಲ ಆತಂಕಕ್ಕೊಳಗಾದ ಘಟನೆ ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಧ್ವಧ್ವಜಾರೋಹಣ ಮಾಡುವಾಗ ಸಣ್ಣ ಎಡವಟ್ಟು ಉಂಟಾಗಿದೆ. ಕೆಲವು ನಿಮಿಷಗಳ ಕಾಲ ಬಾವುಟ ಬಿಡಿಸಿಕೊಳ್ಳದೆ ಆತಂಕ ಮನೆ ಮಾಡಿತ್ತು. ಧ್ವಜಾರೋಹಣ ಮಾಡುತ್ತಿದ್ದಂತೆ ಧ್ವಜದ ಹಗ್ಗದ ಜಾರುಗಂಟು ಬಿಡಿಸಿಕೊಳ್ಳದ ಕಾರಣ ಎಂಬಿಟಿ ವಿಚಲಿತರಾದರು. ಗಟ್ಟಿಯಾದ ಎಳೆದ ಬಳಿಕ ಬಾವುಟದ ಗಂಟು ಜಾರಿದ ಬಳಿಕ ನಿಟ್ಟುಸಿರು ಬಿಟ್ಟರು.
ಈ ವೇಳೆ ಜಿಲ್ಲಾಧಿಕಾರಿ ಆರ್ ಲತಾ. ಎಸ್ಪಿ.ಮಿಥುನ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಭಾಘಿಯಾಗಿದ್ರು. ಧ್ವಜಾರೋಹಣದ ಬಳಿಕ ವಿಶೇಷ ಜೀಪ್ ಹತ್ತಿ ಎಂಟಿಬಿ ನಾಗರಾಜ್ ಪಥ ಸಂಚಲನ ನಡೆಸಿದ್ರು.