ಗೊಲ್ಲರಹಟ್ಟಿಯಲ್ಲಿ ಮೌಢ್ಯಾಚರಣೆ; ಒಂದು ತಿಂಗಳ ಮಗು ಸಾವು
ತುಮಕೂರು; ಮೌಢ್ಯಕ್ಕೆ ಒಂದು ತಿಂಗಳ ಹಸುಗೂಸು ಬಲಿಯಾಗಿದೆ. ಸಮಾಜ ಎಷ್ಟೇ ಮುಂದುವರೆದರೂ ಗೊಲ್ಲರ ಸಮುದಾಯ ಇನ್ನೂ ಮೂಢನಂಬಿಕೆಯಲ್ಲಿ ಮುಳುಗಿದೆ. ತುಮಕೂರು ತಾಲ್ಲೂಕಿನ ಮಲ್ಲೇನಹಳ್ಳಿ ಬಳಿಯ ಗೊಲ್ಲರಹಟ್ಟಿಯಲ್ಲಿ ಮಹಿಳೆಯೊಬ್ಬರಿಗೆ ಮಗುವಾಗಿದ್ದು, ಸೂತಕದ ನೆಪವೊಡ್ಡಿ, ಮಗು ಹಾಗೂ ತಾಯಿಯನ್ನು ಊರ ಹೊರಗೇ ಗುಡಿಸಲು ಹಾಕಿ ಇಡಲಾಗಿತ್ತು. ಇದರಿಂದಾಗಿ ಮಗುವಿಗೆ ಶೀತ ಹೆಚ್ಚಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮಗು ಸಾವನ್ನಪ್ಪಿದೆ. ಹೀಗಿದ್ದರೂ ಗೊಲ್ಲರಹಟ್ಟಿಯ ಜನ ಸೂತಕದ ನೆಪವೊಡ್ಡ ಬಾಣಂತಿಯನ್ನು ಕೂಡಾ ಊರೊಳಗೆ ಬಿಟ್ಟುಕೊಳ್ಳುವುದಿಲ್ಲ ಎನುತ್ತಿದ್ದಾರೆ. ಹೀಗಾಗಿ ತಹಸೀಲ್ದಾರ್ ಗ್ರಾಮಸ್ಥ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ.
ವಸಂತ ಎಂಬಾಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗುವಿಗೆ ಜನ್ಮ ನೀಡುತ್ತಿದ್ದಂತೆ ಊರವರೆಲ್ಲಾ ಸೇರಿ ಆಕೆ ಹಾಗೂ ಮಗುವನ್ನು ಊರಾಚೆ ಗುಡಿಸಲು ಹಾಕಿ ಇಟ್ಟಿದ್ದರು. ಈ ಮಳೆಗಾಲವಾದ್ದರಿಂದ ಮಗುವಿಗೆ ಶೀತ ಹೆಚ್ಚಾಗಿ ಸಾವನ್ನಪ್ಪಿದೆ. ಗೊಲ್ಲರಹಟ್ಟಿಗಳಲ್ಲಿ ಇಂತ ಮೌಢ್ಯಾಚಾರಣೆಗಳು ಇಂದಿಗೂ ಜಾರಿಯಲ್ಲಿವೆ.