CrimeDistricts

ರೀಲ್ಸ್‌ ಟೀಚರ್‌ ಕೊಲೆ ಆರೋಪಿ 4 ದಿನಗಳ ನಂತರ ಅರೆಸ್ಟ್‌

ಮಂಡ್ಯ; ರೀಲ್ಸ್‌ ಟೀಚರ್‌ ಎಂದೇ ಹೆಸರಾಗಿದ್ದ  ಮೇಲುಕೋಟೆ ಖಾಸಗಿ ಶಾಲೆ ಶಿಕ್ಷಕಿ ದೀಪಿಕಾ ಕೊಲೆ ಆರೋಪಿಯನ್ನು ನಾಲ್ಕ ದಿನಗಳ ನಂತರ ಬಂಧಿಸಲಾಗಿದೆ. ಮೃತದೇಹ ಸಿಕ್ಕ 30 ಗಂಟೆಯಲ್ಲೇ ಆರೋಪಿ ನಿತೀಶ್‌ನನ್ನು ಪತ್ತೆ ಹಚ್ಚಿರುವ ಮೇಲುಕೋಟೆ ಪೊಲೀಸರು, ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಆರೋಪಿ ನಿತೀಶ್‌, ಕೊಲೆಯಾದ ಟೀಚರ್‌ ದೀಪಿಕಾ ಜೊತೆ ಸಲುಗೆಯಿಂದ ಇದ್ದ. ಅಕ್ಕ ಅಕ್ಕ ಎಂದು ಆಕೆಯ ಹಿಂದೆಯೇ ತಿರುಗಾಡುತ್ತಿದ್ದ. ಆದ್ರೆ ಅದೇನಾಯ್ತೋ ಏನೋ ಆರೋಪಿ, ದೀಪಿಕಾಳನ್ನು ಕೊಲೆ ಮಾಡಿ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಶವವನ್ನು ಹೂತಿಟ್ಟಿದ್ದ ಎಂದು ತಿಳಿದುಬಂದಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮದ ಶಿಕ್ಷಕಿ ದೀಪಿಕಾ (28) ಳನ್ನು ಜನವರಿ 20ರಂದು ಕೊಲೆ ಮಾಡಲಾಗಿತ್ತು. ನಿನ್ನೆ ಆಕೆಯ ಶವ ಪತ್ತೆಯಾಗಿತ್ತು.

ಮೇಲುಕೋಟೆಯಲ್ಲಿ ದೀಪಿಕಾಳನ್ನ ಎಳೆದಾಡುತ್ತಿದ್ದ ದೃಶ್ಯವನ್ನ ಬೆಟ್ಟದ ಮೇಲಿಂದ ಪ್ರವಾಸಿಗೊಬ್ಬರು ವಿಡಿಯೋ ಮಾಡಿದ್ದರು. ಆರೋಪಿ ನಿತೀಶ್ ಅವರು ದೀಪಿಕಾಗೆ ಕಡೆಯದಾಗಿ ಫೋನ್ ಮಾಡಿದ್ದರು.

Share Post