ಬಂಡೀಪುರದಲ್ಲಿಯೂ ಹೊಸ ವರ್ಷಾಚರಣೆಗೆ ಅನುಮತಿ ಇಲ್ಲ
ಚಾಮರಾಜನಗರ : ಬಂಡೀಪುರದಲ್ಲಿ ಹೊಸ ವರ್ಷಾಚರಣೆ ಮಾಡುವಂತಿಲ್ಲ. ನ್ಯೂ ಇಯರ್ ಆಚರಣೆಗೆ ಬ್ರೇಕ್ ಹಾಕಿದ ಜಿಲ್ಲಾಡಳಿತ. ಡಿಸೆಂಬರ್ ೩೧ ಮತ್ತು ಜನವರಿ ೧ರಂದು ಪ್ರವಾಸಿಗರ ವಾಸ್ತವ್ಯವನ್ನು ಜಿಲ್ಲಾಡಳಿತ ನಿಷೇಧಿಸಿದೆ.
ಪ್ರತಿವರ್ಷ ಅಸಂಖ್ಯಾತ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಹೊಸ ವರ್ಷಾಚರಣೆ ನಡೆಸುತ್ತಿದ್ದರು. ಆದರೆ ಈಗ ಕೋವಿಡ್‌ನ ರೂಪಾಂತರಿ ತಳಿ ಓಮಿಕ್ರಾನ್ ಹರಡುವ ಭೀತಿಯಿಂದ ಜಿಲ್ಲಾಡಳಿತ ನಿಷೇಧ ಹೇರಿದೆ. ವಾಸಿಗರು ಹೊಸ ವರ್ಷಾರಣೆಗೆ ಕೆಲದಿನಗಳ ಮುಂಚೆಯೇ ಇಲ್ಲಿನ ಅರಣ್ಯ ಇಲಾಖೆಯ ಕಾಟೇಜ್‍ಗಳು ಹಾಗೂ ಡಾರ್ಮೆಟರಿಗಳನ್ನು ಆನ್‍ಲೈನ್ ಮೂಲಕ ಬುಕ್ ಮಾಡುತ್ತಿದ್ದರು. ಆದರೆ ಈ ಬಾರಿ ಡಿಸೆಂಬರ್ 31 ಹಾಗು ಜನವರಿ 1ಕ್ಕೆ ಆನ್ ಲೈನ್ ಮೂಲಕ ಬುಕ್ ಮಾಡುವುದನ್ನು ಬ್ಲಾಕ್ ಮಾಡಲಾಗಿದೆ.
ಎಂದಿನಂತೆ ಬೆಳಗ್ಗೆ ಮತ್ತು ಸಾಯಂಕಾಲ ಸಫಾರಿ ಇರುತ್ತದೆ. ಆದರೆ ವಾಸ್ತವ್ಯಕ್ಕೆ ಅವಕಾಶ ಇಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರೆ ನಟೇಶ್ ತಿಳಿಸಿದ್ದಾರೆ.