National

ಸುಪ್ರೀಂಕೋರ್ಟ್‌ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಲಲಿತ್‌ ಪ್ರಮಾಣ

ನವದೆಹಲಿ; ಸುಪ್ರೀಂಕೋರ್ಟ್​ ನೂತನ ಮುಖ್ಯ ನಾಯಮೂರ್ತಿಯಾಗಿ ಉದಯ್​ ಉಮೇಶ್​ ಲಲಿತ್​ ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿಂದು ಪ್ರಮಾಣ ವಚನ ಬೋಧಿಸಿದರು. ಯು.ಯು.ಲಿಲಿತ್​ ಅವರು 49ನೇ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಯುಯು ಲಲಿತ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ 74 ದಿನಗಳ ಕಾಲ ಕೆಲಸ ನಿರ್ವಹಿಸಲಿದ್ದಾರೆ.

  ಇದಕ್ಕೂ ಮೊದಲು ಅವರು ನಿರ್ಗಮಿತ ಸಿಜೆಐ ಎನ್​.ವಿ. ರಮಣ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಸುಪ್ರೀಂಕೋರ್ಟ್​ ಮುಂದಿರುವ ಪ್ರಕರಣಗಳನ್ನು ಪಟ್ಟಿ ಮಾಡುವುದು ಮತ್ತು ತುರ್ತು ವಿಷಯಗಳನ್ನು ಕೈಗೆತ್ತಿಕೊಂಡು ಪರಿಹರಿಸುವುದು ನನ್ನ ಮೊದಲ ಆದ್ಯತೆಯಾಗಲಿದೆ ಎಂದು ತಿಳಿಸಿದರು.

Share Post