CrimeDistricts

ಬೈಕ್‌ಗೆ ಕಾರು ಡಿಕ್ಕಿ; ತಂದೆ-ಮಗಳು ದಾರುಣ ಸಾವು

ರಾಮನಗರ; ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ತಂದೆ-ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ರಾಮನಗರ ಜಿಲ್ಲೆ ಮಾಗಡಿಯ ಸಾಬರಪಾಳ್ಯದಲ್ಲಿ ಈ ದುರ್ಘಟನೆ ನಡೆದಿದೆ.

ಯೋಗೇಶ್ (47) ಹಾಗೂ ಮಗಳು ಹರ್ಷಿತಾ(14) ಅಪಘಾತದಲ್ಲಿ ಸಾವನ್ನಪ್ಪಿದ ತಾಯಿ-ಮಗಳು. ಇವರು ಮಾಗಡಿಯ ಕಲ್ಯಾ ಗ್ರಾಮದವರು ಎಂದು ತಿಳಿದುಬಂದಿದೆ.  ಯೋಗೇಶ್‌ ಅವರು ಮಗಳನ್ನ ಶಾಲೆಗೆ ಬಿಡಲು ಹೋಗುತ್ತಿದ್ದರು. ಈ ವೇಳೆ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post