ಅಕ್ರಮ ಸಂಬಂಧದಿಂದ ಗರ್ಭಿಣಿ; ತುಮಕೂರಲ್ಲಿ ಸ್ವಯಂ ಹೆರಿಗೆ ಮಾಡಿಕೊಂಡ ಯುವತಿ!
ತುಮಕೂರು; ಅಕ್ರಮ ಸಂಬಂಧಿಂದ ಗರ್ಭಿಣಿಯಾಗಿದ್ದ ಯುವತಿ, ಮನೆಯವರಿಗೆ ತಿಳಿಸಲು ಆಗದೇ, ತಾನೇ ಹೆರಿಗೆ ಮಾಡಿಕೊಂಡು ಮಗುವಿನ ಸಾವಿಗೆ ಸಾವಿಗೆ ಕಾರಣವಾಗಿರುವ ಘಟನೆ ತುಮಕೂರು ಬಳಿ ಅರೇಗುಜ್ಜನಹಳ್ಳಿಯಲ್ಲಿ ನಡೆದಿದೆ. ಗೌರೀಪುರ ಗ್ರಾಮದ 25 ವರ್ಷದ ಯುವತಿಯೇ ಈ ಕೆಲಸ ಮಾಡಿದವಳು.
ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದ ಯುವತಿ ಮನೆಯಲ್ಲೊ ದೊಗಳೆ ಬಟ್ಟೆಗಳನ್ನು ಧರಿಸಿ, ಗರ್ಭಿಣಿಯಾಗಿರುವುದನ್ನು ಮನೆಯವರಿಗೆ ಗೊತ್ತಾಗದಂತೆ ನೋಡಿಕೊಂಡಿದ್ದಳು. ನಂತರ ಎರಡು ದಿನದ ಹಿಂದೆ ರಾತ್ರಿ ವೇಳೆ ಹೊಲವೊಂದಕ್ಕೆ ಹೋಗಿದ್ದ ಯುವತಿ ಅಲ್ಲೇ ತಾನೇ ಹೆರಿಗೆ ಮಾಡಿಕೊಂಡಿದ್ದಾಳೆ. ಅನಂತರ ಮಗುವನ್ನು ಅಲ್ಲೇ ಎಸೆದುಹೋಗಿದ್ದಾಳೆ. ಇದರಿಂದ ಮಗು ಸತ್ತುಹೋಗಿವೆ.
ಯುವತಿಗೆ ಪೋಷಕರು ಇಲ್ಲ. ಹೀಗಾಗಿ ಅಕ್ಕನ ಮನೆಯಲ್ಲಿ ಆಕೆ ವಾಸವಿದ್ದಳು. ಮಗುವನ್ನು ಎಸೆದ ನಂತರ, ಮನೆಗೆ ಬಂದು ಋತುಚಕ್ರದ ಕಾರಣ ಹೇಳಿ ಸ್ನಾನ ಮಾಡಿದ್ದಾಳೆ. ಆದರೆ ಬೆಳಿಗ್ಗೆ ಗ್ರಾಮಸ್ಥರ ಕಣ್ಣಿಗೆ ನವಜಾತ ಹೆಣ್ಣುಮಗುವಿನ ಶವ ಸಿಕ್ಕಿದೆ. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ರಕ್ತಸ್ರಾವದಿಂದ ಬಳಲುತ್ತಿದ್ದ ಯುವತಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಗುರುತಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.