ಸ್ಯಾಂಟ್ರೋ ರವಿ ಕೇಸ್ ಸಿಐಡಿ ಸುಪರ್ದಿಗೆ; ಸರ್ಕಾರದಿಂದ ನಿರ್ದೇಶನ
ಮೈಸೂರು; ಗುಜರಾತ್ನಲ್ಲಿ ಸಿಕ್ಕಿಬಿದ್ದಿದ್ದ ಸ್ಯಾಂಟ್ರೋ ರವಿಗೆ ೧೫ ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಈ ನಡುವೆ ರಾಜ್ಯ ಸರ್ಕಾರ ಈ ಪ್ರಕರಣ ಸಿಐಡಿ ಸುಪರ್ದಿಗೆ ನೀಡುವಂತೆ ನಿರ್ದೇಶನ ನೀಡಿದೆ.
ಮೈಸೂರು ನಗರ ಪೊಲೀಸರು ಸದ್ಯ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆದ್ರೆ ರಾಜ್ಯ ಸರ್ಕಾರ ಮೈಸೂರು ಪೊಲೀಸರಿಗೆ ಸೂಚನೆ ನೀಡಿದ್ದು, ಸಿಐಡಿಗೆ ಪ್ರಕರಣ ವರ್ಗಾಯಿಸುವಂತೆ ಹೇಳಿದೆ. ಸ್ಯಾಂಟ್ರೊ ರವಿ ವಿರುದ್ಧದ ದೂರುಗಳ ಬಗ್ಗೆ ತನಿಖೆ ನಡೆಸಲು ಸಿಐಡಿ ವಹಿಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. ಡಿಜಿ&ಐಜಿಪಿ ಆದೇಶದಂತೆ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಅಷ್ಟರಲ್ಲಿ ಸಿಐಡಿಗೆ ಅಧಿಕೃತವಾಗಿ ಸ್ಯಾಂಟ್ರೊ ರವಿ ಪ್ರಕರಣ ವರ್ಗಾವಣೆ ಅಗಲಿದೆ.