3 ವರ್ಷದಲ್ಲಿ ಗರ್ಭಿಣಿಯರಾದ 45000 ಅಪ್ರಾಪ್ತ ಬಾಲಕಿಯರು..!
ಬೆಂಗಳೂರು; ಬಾಲ್ಯ ವಿವಾಹ ತಡೆಗೆ ಹಲವು ಕಠಿಣ ಕಾನೂನುಗಳಿವೆ. ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರ ಮೇಲೂ ಕಠಿಣಾತಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಿದ್ದರೂ, ಅಪ್ರಾಪ್ತ ವಯಸ್ಸಿನಲ್ಲಿ ಬಾಲಕಿಯರು ಗರ್ಭಿಣಿಯರಾಗುತ್ತಿದ್ದಾರೆ. ಸರ್ಕಾರವೇ ನೀಡಿರುವ ಮಾಹಿತಿ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ 45,557 ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆ ಆರ್‌ಟಿಐ ಮೂಲಕ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಕೇಳಿತ್ತು. ಆ ಇಲಾಖೆ ಕೊಟ್ಟ ಮಾಹಿತಿ ಇದಾಗಿದೆ.
ರಾಜ್ಯ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ 2020ರಲ್ಲಿ 10,101 ಹದಿಹರೆದವರು ಗರ್ಭಧಾರಣೆ ಮಾಡಿದ್ದರು. 2021ರಲ್ಲಿ 13,159 ಮಂದಿ ಗರ್ಭದಾರಣೆ ಮಾಡಿದ್ದಾರೆ. ಇನ್ನು 2023ರ ಜೂನ್‌ವರೆಗೆ 2,736 ಮಂದಿ ಅಪ್ರಾಪ್ತರು ಗರ್ಭಿಣಿಯರಾಗಿದ್ದಾರೆ.