ತೂಕ ಇಳಿಸಿಕೊಳ್ತಿರುವ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ; ಈಗ ಹೇಗಾಗಿದ್ದಾರೆ ಗೊತ್ತಾ..?
ಬೆಂಗಳೂರು; ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಹಿನ್ನೆಲೆಯಲ್ಲಿ ಸಿದ್ಧತೆ ನಡೆಸಿದ್ದು, ದೇಹದಂಡನೆ ಮೂಲಕ ತೂಕ ಇಳಿಸಿಕೊಳ್ಳುತ್ತಿದ್ದಾರೆ. ದೇಹ ದಂಡನೆಯಿಂದಾಗಿ ಏನೆಲ್ಲಾ ನೋವು ಅನುಭವಿಸಬೇಕು ಅನ್ನೋದನ್ನ ಅವರು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಆಗಿನ್ನೂ ವ್ಯಾಯಾಮ ಮುಗಿಸಿ ಬಂದು ವಿಡಿಯೋ ಮಾಡಿರುವ ಅವರು, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ರಮ್ಯಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಜೊತೆಗೆ ವಿಡಿಯೋಗೆ ಎಂಡೋರ್ಫಿನ್ಸ್ ಎಂಬ ಶೀರ್ಷಿಕೆ ಬರೆದಿದ್ದಾರೆ. ಹಾಗಂದ್ರೆ ಅದೊಂದು ಹಾರ್ಮೋನು. ದೇಹ ದಂಡನೆ ಮಾಡಿದಾಗ ಬಿಡುಗಡೆಯಾಗುವ ಈ ಹಾರ್ಮೋನ್ ಇದಾಗಿದೆ. ವಿದೇಶದಲ್ಲಿರುವ ರಮ್ಯಾ, ಸಖತ್ ದೇಹ ದಂಡನೆ ಮಾಡುತ್ತಿದ್ದಾರೆ. ತೂಕ ಇಳಿಸಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅವರು ತಯಾರಿ ನಡೆಸಿದ್ದಾರೆ.