Districts

ತಾರಕಕ್ಕೇರಿದ ಹಿಜಾಬ್‌ ವಿವಾದ: ರಾಜ್ಯದ ವಿವಿಧೆಡೆ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು

ಬೆಂಗಳೂರು: ಹಿಜಾಬ್‌, ಕೇಸರಿ ಶಾಲು ವಿವಾದದ ಕಿಚ್ಚು ಹೊತ್ತಿ ಉರಿಯುತ್ತಿದೆ. ಪರಿಸ್ಥಿತಿ ತಿಳಿಗೊಳಸಲು ಸರ್ಖಾರ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇಂದು ಕಾಲೇಜುಗಳು ತೆರೆಯುತ್ತಿದ್ದಂತೆ ವಿವಾದ ಮತ್ತೆ ಭುಗಿಲೆದ್ದಿದೆ. ಬೇಕಾದ್ರೆ ಸಾಯ್ತೇವೆ ಹೊರತು ಹಿಜಾಬ್‌ ತೆಗೆಯಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಶಿಕ್ಷಕರು-ಪೋಷಕರ ನಡುವೆ ಹಲವೆಡೆ ವಾಗ್ವಾದ ನಡೆದಿದೆ. ಇನ್ನೂ ಕೆಲವು ಕಡೆ ಅಲ್ಲಾಹು ಅಕ್ಬರ್‌ ಎಂದು ಘೋಷಣೆ ಕೂಗಿದ್ದಾರೆ. ವಿವಾದ ಕುರಿತು ಕೆಲವು ಕಾಲೇಜುಗಳ ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ..

ರಾಮನಗರ: ಹಿಜಾಬ್‌ಗೆ ಅವಕಾಶ ನೀಡಿಲ್ಲ..ಹಾಗಾಗಿ ನಾವು ಕಾಲೇಜಿಗೆ ಹೋಗಲ್ಲ. ಕಾಲೇಜು ಮುಂದೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ. ನಮಗೆ ನ್ಯಾಯ ಕೊಡಿ, ನ್ಯಾಯ ಸಿಗುವವರೆಗೂ ನಾವು ಮನೆಗೂ ಹೋಗುವುದಿಲ್ಲ ಎಂದು ಪೊಲೀಸರ ಜೊತೆ ವಿದ್ಯಾರ್ಥಿನಿಯರು ವಾಗ್ವಾದ ನಡೆಸಿದ್ದರೆ. ರಾಮನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೈಡ್ರಾಮಾ ಶುರುವಾಗಿದೆ.

ಹುಬ್ಬಳ್ಳಿ: ಕಾಲೇಜಿನಲ್ಲಿ ಹಿಜಾಬ್‌ ಗಲಾಟೆ ತಾರಕಕ್ಕೇರಿದ ಕಾರಣ ಕಾಲೇಜಿಗೆ ರಜೆ ನೀಡಲಾಗಿದೆ. ಹುಬ್ಬಳ್ಳಿಯ ಮೂರು ಸಾವಿರ ಮಠದ ಮಹಿಳಾ ಕಾಲೇಜಿನಲ್ಲಿ ಅನಿರ್ದಿಷ್ಟಾವಧಿ ರಜೆಯನ್ನು ಘೋಷಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ ಮಾಡಿದ ಪ್ರಾಂಶುಪಾಲರು. ಪ್ರಿನ್ಸಪಾಲ್‌ ಹಿಜಾಬ್‌ ತೆಗೆದು ಒಳಬರುವಂತೆ ಕೈ ಮುಗಿದು ಮನವಿ ಮಾಡಿಕೊಂಡರೂ ಕರಗದ ವಿದ್ಯಾರ್ಥಿನಿಯರು. ನಮಗೂ ಒಂದು ಅವಕಾಶ ಕೊಡಿ ಎಂದು ಪ್ರತ್ಯುತ್ತರ.

ಗದಗ: ರಾಜ್ಯದಲ್ಲಿ ಹಿಜಾಬ್‌, ಕೇಸರಿ ಶಾಲು ವಿವಾದ ಹಿನ್ನೆಲೆ ಇಂದು ಕೇವಲ 10ವಿದ್ಯಾರ್ಥಿನಿಯರು ಮಾತ್ರ ಹಾಜರಾಗಿದ್ದಾರೆ. ಗದಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 59ವಿದ್ಯಾರ್ಥಿಗಳು ಕಾಲೇಜಿಗೆ ಗೈರಾಗಿದ್ದಾರೆ.

ಬೆಳಗಾವಿ: ಬುರ್ಖಾ ತೆಗೆಯುತ್ತೇವೆ ಆದ್ರೆ ಹಿಜಾಬ್‌ ತೆಗೆಯಲ್ಲ ಎಂದು ಬೆಳಗಾವಿ RLSಕಾಲೇಜಿನ ವಿದ್ಯಾರ್ಥಿಗಳು ಹಠ ಹಿಡಿದಿದ್ದಾರೆ. ನಮಗೆ ತರಗತಿಗಿಂತ ಹಿಜಾಬ್‌ ಮುಖ್ಯ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಹಿಜಾಬ್‌ಗೆ ಅವಕಾಶ ನೀಡದ ಹಿನ್ನೆಲೆ ಮನೆಗೆ ವಾಪಸಾಗಿದ್ದಾರೆ.

ಚಿಕ್ಕಮಗಳೂರು: ಹಿಜಾಬ್‌ ಧರಿಸಿ ಕಾಲೇಜಿಗೆ ಎಂಟ್ರಿ ಕೊಟ್ಟ ವಿದ್ಯಾರ್ಥಿನಿಯರು ಮಲೆನಾಡು ವಿದ್ಯಾಸಂಸ್ಥೆ ಆವರಣದಲ್ಲಿ ಹೈಡ್ರಾಮಾ ಶುರುವಾಗಿದೆ. ಪೊಲೀಸರಿಗೆ ಲೆಕ್ಕಿಸದೇ ಕಾಲೇಜು ಪ್ರವೇಶಕ್ಕೆ ಸ್ಟೂಡೆಂಟ್ಸ್‌ ಯತ್ನಿಸಿದ್ದಾರೆ.

ಶಿವಮೊಗ್ಗ: ATNCC ಕಾಲೇಜಿನ ಬಳಿ ಹಿಜಾಬ್‌ ಕೋಲಾಹಲ ಉಂಟಾಗಿದೆ. ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಧರಣಿ ನಡೆಸಿದ್ದಾರೆ. ವಿದ್ಯಾರ್ಥಿನಿಯರ ಮನವೊಲಿಕೆ ಮಾಡಲು DYSPಸತತ ಪ್ರಯತ್ನ ಪಡ್ತಿದಾರೆ. ಆದರೂ ಪಟ್ಟು ಬಿಡದೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ.

Share Post