Districts

ಕೋಲಾರದ ಬಳಿ ತಪ್ಪಿದ ಭೀಕರ ರೈಲು ದುರಂತ; ನೂರಾರು ಜನ ಪಾರು..!

ಕೋಲಾರ: ಮಾಲೂರು ತಾಲ್ಲೂಕು ಟೇಕಲ್‌ ರೈಲು ನಿಲ್ದಾಣದಲ್ಲಿ ದೊಡ್ಡ ರೈಲು ದುರಂತವೊಂದು ತಪ್ಪಿದೆ. ನೂರಾರು ಪ್ರಯಾಣಿಕರು ದೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಘಟನೆಯಲ್ಲಿ ಒಬ್ಬ ಪ್ರಯಾಣಿಕ ಸಾವನ್ನಪ್ಪಿದ್ದಾನೆ. 

ತಾಂತ್ರಿಕ ದೋಷದಿಂದ ನಿಂತಿದ್ದ ರೈಲಿನಿಂದ ಇಳಿಯುತ್ತಿದ್ದ ಪ್ರಯಾಣಿಕರಿಗೆ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿಯಾಗುವ ಸಾಧ್ಯತೆ ಇತ್ತು. ಆದರೆ ರೈಲು ಬರುತ್ತಿದ್ದಂತೆ ಇನ್ನೊಂದು ಹಳಿಗೆ ಓಡಿದ್ದರಿಂದ ಜನ ಅಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಕಡಿತದಿಂದಾಗಿ ರೈಲುಗಳು ಮಾರ್ಗ ಮಧ್ಯೆ ನಿಂತಿದ್ದವು. ಅದೇ ಸಂದರ್ಭದಲ್ಲಿ ಎಕ್ಸ್‌ಪ್ರೆಸ್ ರೈಲಿಗೆ ರೈಲ್ವೆ ಅಧಿಕಾರಿಗಳು ಸಿಗ್ನಲ್ ನೀಡಿದ್ದು, ರೈಲು ಇಳಿದು ಹಳಿ ಮೇಲೆ ಪ್ರಯಾಣಿಕರು ನಿಂತಿದ್ದರು.  ಈ ವೇಳೆ ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ವೇಗವಾಗಿ ನುಗ್ಗಿ ಬಂದಿದ್ದು, ಪ್ರಯಾಣಿಕರು ಬಚಾವ್​ ಆಗಲು ಯತ್ನಿಸುವ ವೇಳೆಗೆ ಡಿಕ್ಕಿ ಹೊಡೆದಿದೆ. ಲೋಕೋ ಪೈಲಟ್ ಸತತವಾಗಿ ಹಾರ್ನ್ ಮಾಡುತ್ತಿದ್ದರೂ ಕೂಡ ಜನ ಹಳಿ ಮೇಲೆ ನಿಂತಿದ್ದರು. ಹೀಗಾಗಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.ಟೇಕಲ್ ಹೊರಠಾಣೆ, ಬಂಗಾರಪೇಟೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Share Post