Districts

ಜನ ಸಹಕರಿಸದಿದ್ದರೆ ಲಾಕ್‌ ಡೌನ್‌ ಅನಿವಾರ್ಯ : ಆರಗ ಜ್ಞಾನೇಂದ್ರ

ಚಿಕ್ಕಮಗಳೂರು : ಕೋವಿಡ್‌, ಓಮಿಕ್ರಾನ್‌ ಸಂಬಂಧಿಸಿದಂತೆ ಜನರು ಎಚ್ಚರ ತಪ್ಪಬಾರದು. ಸರ್ಕಾರದೊಂದಿಗೆ ಜನ ಸಹಕರಿಸಬೇಕು. ಸಹಕರಿಸದಿದ್ದರೆ ಲಾಕ್‌ಡೌನ್‌ ಅನಿವಾರ್ಯ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ  ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಜನರು ಕೋವಿಡ್‌ ನಿಯಮಗಳನ್ನು ಪಾಲನೆ ಮಾಡಬೇಕು, ಸರ್ಕಾರ ಜನರ ಜೀವ ಉಳಿಸಲು ಬದ್ಧವಾಗಿದೆ. ಈಗಾಗಲೇ ಬೆಂಗಳೂರನ್ನು ರೆಡ್‌ ಜೋನ್‌ ಎಂದು ಪರಿಗಣಿಸಲಾಗಿದೆ. ಕೊರೊನಾ ಮತ್ತಷ್ಟು ಹೆಚ್ಚಾದರೆ ಲಾಕ್‌ಡೌನ್‌ ಅನಿವಾರ್ಯ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.

ಕಾಂಗ್ರೆಸ್‌ ಪಾದಯಾತ್ರೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ವಿರೋಧ ಪಕ್ಷವಾಗಿ ಅವರಿಗೆ ಹೋರಾಟ ನಡೆಸಲು ಅವಕಾಶವಿದೆ ಆದರೆ ಕೋವಿಡ್ ಸಮಯದಲ್ಲಿ ರಾಜಕಾರಣದ ನಡೆಯನ್ನ ಮುಂದೂಡುವುದು ಒಳ್ಳೆಯದು ಎಂದರು.

ಇನ್ನು ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಅವರು, ಅದೆಲ್ಲಾ ಗಾಳಿ ಸುದ್ದಿ, ಸತ್ಯಕ್ಕೆ ದೂರವಾಗಿದೆ ಎಂದರು.

Share Post