Bengaluru

ನಾಳೆಯಿಂದಲೇ ರಾಜ್ಯದಲ್ಲಿ ಮತ್ತಷ್ಟು ಟಫ್‌ ರೂಲ್ಸ್‌ ಜಾರಿ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಮತ್ತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ ರೂಪಾಂತರಿ ತಳಿ ಒಮಿಕ್ರಾನ್‌ ಕೂಡ ಅತೀ ವೇಗದಲ್ಲಿ ಹರಡುತ್ತಿದ್ದು, ಹೀಗಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರಾಜ್ಯದಲ್ಲಿ ಕಠಿಣ ರೂಲ್ಸ್‌ ಜಾರಿಗೆ ತಂದಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಹೊಸದಾಗಿ ಪ್ರಕರಣ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ೧೦ ಒಮಿಕ್ರಾನ್‌ ಪ್ರಕರಣ ಕಂಡುಬಂದಿದೆ. ಇವರೆಗೆ ಸೋಂಕಿತರ ಸಂಖ್ಯೆ ೭೬ಕ್ಕೆ ತಲುಪಿದೆ. ಇದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. ಈಗಾಗಲೇ ನಗರದಲ್ಲಿ ಕಳೆದ ಡಿಸೆಂಬರ್‌ ೨೮ ರಿಂದ ನೈಟ್‌ ಕರ್ಫ್ಯೂ ವಿಧಿಸಿದೆ. ಜನವರಿ ೭ ರವೆಗೆ ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೫ ಗಂಟೆಯವರೆಗೆ ನಿಷೇಧಾಜ್ಞೆ ಹೇರಿದೆ. ಇದರ ಮಧ್ಯೆ ಹೊಸ ವರ್ಷ ಆಚರಣೆಗೂ ಕೂಡ ಸರ್ಕಾರ ನಿರ್ಬಂಧ ಹೇರಿದ್ದರು.
ಇದೀಗ ಕೊರೋನಾ ತಡೆಗೆ ಮತ್ತಷ್ಟು ಟಫ್‌ ರೂಲ್ಸ್‌ ಜಾರಿಗೊಳಿಸಲಿದ್ದಾರೆ. ಈ ಕುರಿತು ಸಿಂಎ ಬಸವರಾಜ ಬೊಮ್ಮಾಯಿ ಅವರು ನಗರದ ಆರ್.ಟಿ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಕೊರೋನಾ ಮತ್ತು ಒಮಿಕ್ರಾನ್‌ ಬಹು ವೇಗವಾಗಿ ಹರಡುತ್ತಿದೆ. ಈ ಎರಡು ಸೋಂಕುಗಳನ್ನ ಗಮನದಲ್ಲಿ ಇಟ್ಟುಕೊಂಡು ತಜ್ಞರ ಜೊತೆ ಚರ್ಚೆ ನಡೆಸಬೇಕಿದೆ ಎಂದರು. ಈ ನಿಟ್ಟಿನಲ್ಲಿ ನಾಳೆ ಸಂಜೆ ತಜ್ಞರ ಜೊತೆ ಚರ್ಚೆ ನಡೆಸಲಿದ್ದೇವೆ. ಗುರುವಾರದಂದು ರಾಜ್ಯದ ಸ್ಥಿತಿಗಳನ್ನು ಗಮನಿಸಬೇಕು.
ಈಗಾಗಲೇ ನಾವು ಈ ಹಿಂದೆ ಎರಡು ಅಲೆಗಳನ್ನು ಎದುರಿಸಿದ್ದೇವೆ. ಹೀಗಾಗಿ ಜನರಿಗೆ ಯಾವುದೇ ತೊಂದರೆಯಾಗದಂತೆ ಕೊರೋನಾ ನಿಯಂತ್ರಣಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬುದನ್ನು ಸಲಹೆ ಕೊಡಿ ಎಂದು ತಜ್ಞರಿಗೆ ಹೇಳಿದ್ದೇವೆ ಎಂದು ಹೇಳಿದ್ದಾರೆ.
ಇದನ್ನು ನಿಯಂತ್ರಿಸುವ ಸಲುವಾಗಿ ವ್ಯಾಪಕವಾಗಿ ಜನರಿಗೆ ನೀಡುವುದಕ್ಕಾಗಿ ಲಸಿಕಾ ಅಭಿಯಾನ ಮಾಡಲಿದ್ದೇವೆ ಎಂದರು.

Share Post