CrimeDistricts

ವಯಸ್ಸಲ್ಲಿ ಕಿರಿಯನನ್ನು ಮದುವೆಯಾದ ನರ್ಸ್‌; ಮನಸ್ತಾಪ ಬಂದು ನೇಣಿಗೆ ಶರಣು

ಚಿಕ್ಕಬಳ್ಳಾಪುರ; ಹುಡುಗನ ಪೋಷಕರ ವಿರೋಧದ ನಡುವೆಯೂ ತನಗಿಂತ ಕಿರಿಯ ವಯಸ್ಸಿನ ಹುಡುಗನನ್ನು ಮದುವೆಯಾಗಿದ್ದ ನರ್ಸ್‌ ಇದೀಗ ನೇಣಿಗೆ ಶರಣಾಗಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಈ ಘಟನೆ ನಡೆದಿದೆ.

ಖಾಸಗಿ ಕ್ಲಿನಿಕ್‌ನಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ನಾಗಮಣಿ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡಾಕೆ. ಇಪ್ಪತ್ಮೂರು ವಯಸ್ಸಿನ ಈಕೆ 21 ವರ್ಷದ ತಾತಹಳ್ಳಿ ಗ್ರಾಮದ ಪವನ್‌ ಎಂಬಾತನನ್ನು ಮದುವೆಯಾಗಿದ್ದಳು. ಒಂದೂವರೆ ವರ್ಷದ ಹಿಂದೆ ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಜಾತಿ ಬೇರೆ ಅನ್ನೋ ಕಾರಣಕ್ಕೆ ಪವನ್‌ ಕುಟುಂಬದವರು ಇಬ್ಬರನ್ನೂ ಮನೆಗೆ ಸೇರಿಸಿರಲಿಲ್ಲ. ಹೀಗಾಗಿ ಇಬ್ಬರೂ ಶಿಡ್ಲಘಟ್ಟ ನಗರದಲ್ಲೇ ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ಹೊಂದಾಣಿಕೆಯಾಗುತ್ತಿರಲಿಲ್ಲವಂತೆ. ಮನಸ್ತಾಪಗಳಿಂದಾಗಿ ಆಗಾಗ ಇಬ್ಬರ ನಡುವೆ ಕಲಹಗಳಾಗುತ್ತಿದ್ದವು. ಇದರಿಂದ ಮನನೊಂದು ನಾಗಮಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಶಿಡ್ಲಘಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post