DistrictsHealth

ಉತ್ತರ ಕರ್ನಾಟಕದ ರೈತ ಹೋರಾಗಾರ್ತಿ ಜಯಶ್ರೀ ನಿಧನ

ಬೆಳಗಾವಿ; ಉತ್ತರ ಕರ್ನಾಟಕದಲ್ಲಿ ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.. ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.. ಅವರಿಗೆ ನಲವತ್ತು ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.

ಜಯಶ್ರೀ ಅವರು ಕಬ್ಬಿಗೆ ಬೆಂಬಲ ಬೆಲೆ ಸೇರಿದಂತೆ ಹಲವು ವಿಚಾರವಾಗಿ ದೊಡ್ಡ ಹೋರಾಟಗಳನ್ನು ಸಂಘಟಿಸಿದ್ದರು.. ಕಬ್ಬಿನ ಬಾಕಿ ಬಿಲ್‌ ಪಾವತಿಗಾಗಿ ಆಗ್ರಹಿಸಿ ಸುವರ್ಣ ಸೌದಕ್ಕೆ ಕಬ್ಬು ತುಂಬಿದ ಲಾರಿಗಳನ್ನು ತೆಗೆದುಕೊಂಡು ಹೋಗಿ ಮುತ್ತಿಗೆ ಹಾಕಲಾಗಿತ್ತು.. ಆಗ ಜಯಶ್ರೀ ಮುಂಚೂಣಿಯಲ್ಲಿದ್ದರು.. ಈ ವೇಳೆ ಸಿಎಂ ಆಗಿದ್ದ ಕುಮಾರಸ್ವಾಮಿಯವರು ಜಯಶ್ರೀ  ಬಗ್ಗೆ ಹಗುರವಾಗಿ ಮಾತನಾಡಿದ್ದರು.. ಈ ಕಾರಣಕ್ಕಾಗಿ ಜಯಶ್ರೀ ಅವರು ಇಡೀ ರಾಜ್ಯದ ಜನಕ್ಕೆ ಪರಿಚಯವಾಗಿದ್ದರು..

ಜಯಶ್ರೀ ಅವರು ರಾಜ್ಯದ ವಿವಿಧೆಡೆ ಸಂಚಾರ ಮಾಡಿ ಮಹಿಳೆಯರನ್ನು ರೈತ ಹೋರಾಟಕ್ಕೆ ಇಳಿಸಿದ್ದರು.. ಜಯಶ್ರೀ ಅವರಿಗೆ ಓರ್ವ ಮಗ ಇದ್ದಾನೆ..

 

Share Post