ಇಸ್ಲಾಂಗಿಂತ ಹಿಂದೂ ಧರ್ಮ ಹಳೆಯದು, ಮುಸ್ಲಿಮರೂ ಹಿಂದೂಗಳಾಗಿದ್ದರು; ಗುಲಾಂ ನಬಿ ಆಜಾದ್
ನವದೆಹಲಿ; ಇಸ್ಲಾಂಗಿಂತ ಹಿಂದೂ ಧರ್ಮ ಹಳೆಯದು. ಹೀಗಾಗಿ ಮುಂಚೆ ಮುಸ್ಲಿಮರು ಕೂಡಾ ಹಿಂದೂಗಳಾಗಿದ್ದರು ಎಂದು ಜಮ್ಮು-ಕಾಶ್ಮೀರ ಮಾಜಿ ಸಿಎಂ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಹಿಂದೂ ಧರ್ಮ ಸಾವಿರಾರು ವರ್ಷಗಳ ಹಳೆಯದು. ಆದ್ರೆ ಇಸ್ಲಾಂ ಹುಟ್ಟಿದ್ದು 1500 ವರ್ಷಗಳ ಹಿಂದೆ. ಭಾರತದಲ್ಲಿರುವ ಯಾರೂ ಹೊರಗಿನಿಂದ ಬಂದವರಲ್ಲ. ಈಗಿರುವ ಮುಸ್ಲಿಮರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರು ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಕಾಶ್ಮೀರದಲ್ಲಿ 600 ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರು ಮಾತ್ರ ಇದ್ದರು. ನಂತರ ಮತಾಂತರಗೊಂಡು ಮುಸ್ಲಿಮರಾದರು ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಹೀಗಾಗಿ ನಾವು ಸಹೋದರತೆ, ಶಾಂತಿ, ಐಕ್ಯತೆಯನ್ನು ಕಾಪಾಡಬೇಕೆಂದು ಮನವಿ ಮಾಡಿದರು. ರಾಜಕೀಯದೊಂದಿಗೆ ಧರ್ಮವನ್ನು ಬೆರೆಸಬಾರದು, ಜನರು ಧರ್ಮದ ಹೆಸರಿನಲ್ಲಿ ಮತ ಹಾಕಬಾರದು ಎಂದು ಇದೇ ವೇಳೆ ಆಜಾದ್ ಹೇಳಿದರು.
ಗುಲಾಂ ನಬಿ ಆಜಾದ್ ಕಳೆದ ವರ್ಷ ಕಾಂಗ್ರೆಸ್ ತೊರೆದು ಹೊಸ ಪಕ್ಷವನ್ನು ಸ್ಥಾಪನೆ ಮಾಡಿದ್ದರು.