CrimeDistricts

ಮಾಜಿ ಶಾಸಕರಿದ್ದ ಕಾರು ಪಲ್ಟಿ; ಕಲ್ಲಪ್ಪ ಮಗಣ್ಣವರಗೆ ಗಾಯ

ಬೆಳಗಾವಿ;‌ ಬೆಳಗಾವಿಯ ಚಿಕ್ಕೋಡಿ ಬಳಿ ಮಾಜಿ ಶಾಸಕರ ಕಾರು ಅಪಘಾತಕ್ಕೀಡಾಗಿದೆ.  ಮಾಜಿ ಶಾಸಕ ಹಾಗೂ ಸ್ಥಳೀಯ ಜೆಡಿಎಸ್ ಮುಖಂಡ ಕಲ್ಲಪ್ಪ ಮಗೆಣ್ಣವರ ಅವರು ಪ್ರಯಾಣಿಸುತ್ತಿದ್ದ ಕಾರು ಅಥಣಿ ಪಟ್ಟಣದ ಹೊರವಲಯದಲ್ಲಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮಾಜಿ ಶಾಸಕ ಮಗೆಣ್ಣವರ ಸೇರಿ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮಾಜಿ ಶಾಸಕರು ವಿಜಯಪುರದಿಂದ ಚಿಕ್ಕೋಡಿ ತಾಲೂಕಿನ ತಮ್ಮ ಸ್ವಗ್ರಾಮವಾದ ಮಾಂಜರಿ ಗ್ರಾಮಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಆಗಮಿಸುತ್ತಿರುವಾಗ ಬೆಳಗಾವಿಯ ಅಥಣಿ ಪಟ್ಟಣದ ಹೊರವಲಯದಲ್ಲಿ ಈ ದುರ್ಘಟನೆ ನಡೆದಿದೆ. ವಿಜಯಪುರದತ್ತ ಸಾಗುತ್ತಿದ್ದ ಲಾರಿಯೊಂದರ ಟೈಯರ್ ಬ್ಲಾಸ್ಟ್ ಆಗಿದೆ. ಆ ಟೈಯರ್‌ ಕಳಚಿಕೊಂಡು ಮಾಜಿ ಶಾಸಕ ಮಗೆಣ್ಣವರ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಇದ್ರಿಂದಾಗಿ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ.

Share Post