DistrictsPolitics

ಟಿಪ್ಪು‌ನ ಹೊಡೆದಾಕಿದಂತೆ ಸಿದ್ದುನ ಹೊಡೆದಾಕಬೇಕು; ಅಶ್ವತ್ಥನಾರಾಯಣ್ ವಿವಾದಿತ ಹೇಳಿಕೆ

ಮಂಡ್ಯ: ಟಿಪ್ಪುವನ್ನ ಹೊಡೆದುಹಾಕಿದಂತೆ ಸಿದ್ದರಾಮಯ್ಯನವರನ್ನೂ ಹೊಡೆದುಹಾಕಬೇಕು ಎಂದು ಸಚಿವ ಅಶ್ವತ್ಥನಾರಾಯಣ ತಮ್ಮ ನಾಲಿಗೆ ಹರಿಬಿಟ್ಟಿದ್ದು ವಿವಾದಕ್ಕೆ ಕಾರಣವಾಗಿದ್ದಾರೆ.

ಮಂಡ್ಯದ ಸಾತನೂರು ಗ್ರಾಮದಲ್ಲಿ ನಡೆದ ಕಾರ್ಯಕರ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಸಚಿವ ಅಶ್ವತ್ಥ ನಾರಾಯಣ ಟಿಪ್ಪುವಿನ ಜಾಗಕ್ಕೆ ಸಿದ್ದರಾಮಯ್ಯ ನಿಲ್ಲುತ್ತಾರೆ, ನಿಮಗೆ ಟಿಪ್ಪು ಬೇಕಾ ಸಾವರ್ಕರ್ ಬೇಕಾ ನೀವೆ ತೀರ್ಮಾನ ಮಾಡಿ ಎನ್ನುತ್ತಿದ್ದಂತೆ, ಈ ವೇಳೆ ಕಾರ್ಯಕರ್ತರು ಸಾವರ್ಕರ್ ಬೇಕು ಎಂದಿದ್ದಾರೆ, ಪದೆ ಪದೆ ಸಾವರ್ಕರ್ ಬೇಕು ಎಂಬ ಕೂಗು ಕಾರ್ಯಕರ್ತರಲ್ಲಿ ಕೇಳಿ ಬಂತು. ಮುಂದುವರಿದು ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ ಹಾಗಾದರೆ ಟಿಪ್ಪುವನ್ನ ಉರಿಗೌಡ, ನಂಜೇಗೌಡ ಏನ್ ಮಾಡಿದ್ರು, ಎಂದರು, ಕಾರ್ಯಕರ್ತರು ಹೊಡೆದು ಹಾಕಿದರು ಎಂದಿದ್ದಕ್ಕೆ ಹೌದು ಟಿಪ್ಪುವನ್ನ ಉರಿಗೌಡ, ನಂಜೇಗೌಡ ಹೊಡೆದುಹಾಕಿದಂತೆ ಇವರನ್ನೂ ಹೊಡೆದು ಹಾಕಬೇಕು ಎಂದು ಸಿದ್ದರಾಮಯ್ಯನವರ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Share Post