CrimeDistricts

ಬೆಳಗಾವಿಯಲ್ಲಿ ಕಂತೆ ಕಂತೆ ನಕಲಿ ನೋಟು; ಆಟಿಕೆ ನೋಟು ಕೊಟ್ಟು ಸಿಕ್ಕಿಬಿದ್ದರು..!

ಬೆಳಗಾವಿ; 500 ರೂ. ಮುಖ ಬೆಲೆಯ ನಕಲಿ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಗೋಕಾಕ್‌ ತಾಲ್ಲೂಕಿನ ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕಂತೆ ಕಂತೆ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ನೋಟುಗಳ ಮಕ್ಕಳ ಆಟಿಕೆ ನೋಟುಗಳು ಎಂದು ಗೊತ್ತಾಗಿದೆ.

   ಘಟಪ್ರಭಾ ಪಟ್ಟಣದ ಬಾರ್​ ಒಂದರಲ್ಲಿ ಕ್ಯಾಷಿಯರ್​ಗೆ ನಕಲಿ ನೋಟುಗಳನ್ನು ಕೊಡಲು ಆರೋಪಿಗಳು ಮುಂದಾಗಿದ್ದರು. 500 ರೂಪಾಯಿ ಮುಖಬೆಲೆಯ ನೋಟುಗಳ ಮೇಲೆ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಅಂತಾ ಇತ್ತು. ಇದಲ್ಲದೇ ಫುಲ್ ಆಫ್ ಫನ್ ಅಂತಾ ಇತ್ತು. ಹಾಗಾಗಿ ಅನುಮಾನ ಬಂದ ಹಿನ್ನೆಲೆ ಪೊಲೀಸರಿಗೆ ಬಾರ್ ಮಾಲೀಕರು ದೂರು ನೀಡಿದ್ದರು.

  ಪ್ರಕರಣ ದಾಖಲಿಸಿಕೊಂಡ ಘಟಪ್ರಭಾ ಪೊಲೀಸರು ನಕಲಿ ನೋಟು ಚಲಾವಣೆಗೆ ಯತ್ನಿಸುತ್ತಿದ್ದ, ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಿಂದ 473 ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್.ಪಿ. ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

Share Post