Districts

ಫೆಕ್ಸ್‌ಗಳ ವಿರುದ್ಧ ಭಾರಿ ʻಪ್ರತಾಪʼ; ಸ್ವಪಕ್ಷೀಯರ ವಿರುದ್ಧವೇ ಸಿಡಿದೆದ್ದ ಸಂಸದ

ಮೈಸೂರು: ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಸ್ವಪಕ್ಷೀಯ ಮುಖಂಡರ ವಿರುದ್ಧವೇ ಸಿಡಿದೆದ್ದಿದದ್ದಾರೆ. ಸಚಿವ ಮುರುಗೇಶ್‌ ನಿರಾಣಿ ಆಗಮನಕ್ಕೆ ಸ್ವಾಗತ ಕೋರಿ ಕೆಲ ಬಿಜೆಪಿ ಮುಖಂಡರು ಫ್ಲೆಕ್ಸ್‌ಗಳನ್ನು ಹಾಕಿದ್ದಾರೆ. ಇದಕ್ಕೆ ಪ್ರತಾಪ ಸಿಂಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ಲೆಕ್ಸ್ ಅಳವಡಿಸುವ ರಾಜಕೀಯ ಪಕ್ಷಗಳಿಗೆ ನೋಟಿಸ್ ನೀಡುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರು ಹಾಗೂ ಮೈಸೂರು ಮಹಾ ನಗರ ಪಾಲಿಕೆ ಆಯುಕ್ತರಿಗೆ ಆಗ್ರಹಿಸಿದ್ದಾರೆ.

ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಚಿವ ಮುರಗೇಶ್ ನಿರಾಣಿ ಮೈಸೂರಿಗೆ ಬಂದ ಕಾರಣ ಅವರ ಅಭಿಮಾನಿಗಳು ಸಂಸದ ಪ್ರತಾಪ್ ಸಿಂಹ ಅವರ ಫೋಟೋ ಸಮೇತ ನಗರದ ವಿವಿಧೆಡೆ ಫ್ಲೆಕ್ಸ್ ಹಾಕಿದ್ದರು. ಇದರ ಜೊತೆಗೆ ಜೆಡಿಎಸ್ ನ ಜನತಾ ಜಲಧಾರೆ ಹಿನ್ನೆಲೆಯಲ್ಲೂ ಜೆಡಿಎಸ್ ಮುಖಂಡರು ಎಲ್ಲಾ ಕಡೆ ಫ್ಲೆಕ್ಸ್ ಹಾಕಿದ್ದಾರೆ. ಇವುಗಳ ಫೋಟೋ ಸಮೇತ ಟ್ವೀಟ್ ಮಾಡಿ ಫ್ಲೆಕ್ಸ್ ಹಾಕಿರುವ ರಾಜಕೀಯ ಪಕ್ಷಗಳ ಮುಖಂಡರಿಗೆ ನೋಟಿಸ್ ನೀಡುವಂತೆ ಆಗ್ರಹಿಸಿದ್ದಾರೆ.

Share Post