DistrictsLifestyle

ಮಹಿಷ ಮರ್ಧನದ ಮೂಲಕ ಮಹಿಳೆಯ ಶಕ್ತಿ ಬಿಂಬಿತ; ದ್ರೌಪದಿ ಮುರ್ಮು

ಮೈಸೂರು; ಮಹಿಷಾಸುರ ಮರ್ಧನದಿಂದ ಮಹಿಳೆರ ಶಕ್ತಿ ಬಿಂಬಿತವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಮೈಸೂರಿನಲ್ಲಿ ದಸರಾ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕನ್ನಡದಲ್ಲೇ ಭಾಷಣ ಆರಂಭಿಸಿದರು. ಚಾಮುಂಡೇಶ್ವರಿಗೆ ನನ್ನ ನಮನಗಳು ಎಂದು ಅವರು ಕನ್ನಡದಲ್ಲೇ ಹೇಳಿದರು.

ನಾಡಿನ ಜನರಿಗೆ ದಸರಾ ಶುಭಾಶಯ ತಿಳಿಸುತ್ತೇನೆ ಎಂದು ರಾಷ್ಟ್ರಪತಿಗಳು, ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಬಸವಣ್ಣ, ಅಲ್ಲಮ ಪ್ರಭು ಸೇರಿದಂತೆ ಹಲವು ರಾಜ್ಯಕ್ಕೆ, ದೇಶಕ್ಕೆ ನೀಡಿದ ಕೊಡುಗೆಯನ್ನು ನೆನಪಿಸಿಕೊಂಡರು. ದಸರಾ ಉದ್ಘಾಟನೆಗೆ ನನ್ನನ್ನು ಅಹ್ವಾನಿಸಿದ್ದಕ್ಕೆ ನನಗೆ ಸಂತೋಷವಿದೆ. ಇಲ್ಲಿ ಮಹಿಷಾಸುರನನ್ನು ವಧೆ ಮಾಡಿದ ಬಗ್ಗೆ ಉಲ್ಲೇಖವಿದೆ. ಚಾಮುಂಡೇಶ್ವರಿ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಹೇಳಿದರು.

Share Post