MLA Balakrishna; ಈಗಿರುವ ಬಿಜೆಪಿ ಸಂಸದರು ಯಾರೂ ಗಂಡಸರಲ್ಲ; ಶಾಸಕ ಬಾಲಕೃಷ್ಣ!
ರಾಮನಗರ; ಸದಾ ವಿವಾದಿತ ಹೇಳಿಕೆಗಳನ್ನೇ ನೀಡುವ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಾಮನಗರದಲ್ಲಿ ಮಾತನಾಡಿರುವ ಅವರು, ಬಿಜೆಪಿ ಸಂಸದರು ಯಾರೂ ಗಂಡಸರಲ್ಲಿ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.
ನಮ್ಮ ರಾಜ್ಯಕ್ಕೆ ಬರಬೇಕಾದ ಕೇಂದ್ರ ಅನುದಾನ ಸರಿಯಾಗಿ ಬರುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದರೂ ಯಾವುದೇ ಪ್ರಯೋಜನವಿಲ್ಲ. ಅವರು ಕೇಂದ್ರ ಸರ್ಕಾರದ ಮುಂದೆ ತಮ್ಮ ಹಕ್ಕನ್ನು ಕೇಳುತ್ತಲೇ ಇಲ್ಲ. ಮೋದಿ ಮುಂದೆ ನಮ್ಮ ಸಂಸದರಿಗೆ ಮಾತನಾಡಲೂ ಧೈರ್ಯವಿಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.
ಇದೇ ಕಾರಣಕ್ಕಾಗಿ ಹೆಚ್.ಸಿ.ಬಾಲಕೃಷ್ಣ ಕರ್ನಾಟಕದ ಬಿಜೆಪಿ ಸಂಸದರ ವಿರುದ್ಧ ಹರಿಹಾಯ್ದಿದ್ದಾರೆ. ಈಗಿರುವ ರಾಜ್ಯದ ಯಾವ ಬಿಜೆಪಿ ಸಂಸದರೂ ಗಂಡಸರಲ್ಲ. ನಮ್ಮನ್ನು ನೋಡಿ ಆ ಬಿಜೆಪಿ ಗಂಡಸರು ಹೋರಾಟ ಮಾಡುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.