Districts

HIJAB ROW; ಶಾಲೆಗೆ ಬಾರದ ವಿದ್ಯಾರ್ಥಿನಿಯರು; ಉರ್ದು ಶಾಲೆ ಖಾಲಿ ಖಾಲಿ

ಬೆಂಗಳೂರು; ರಾಜ್ಯದಲ್ಲಿ ಹಿಜಾಬ್‌ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಹೈಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ಮುಂದುವರೆದಿದೆ. ಇಂದೂ ಕೂಡಾ ವಿಚಾರಣೆ ನಡೆಯಲಿದೆ. ವಿಚಾರ ಕೋರ್ಟ್‌ನಲ್ಲಿದ್ದರೂ ಹಿಜಾಬ್‌ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಗೊಂದಲಗಳು ಮುಂದುವರೆದೇ ಇವೆ.

ಇಂದು ಕಲಬುರಗಿಯಲ್ಲಿ ಹಿಜಾಬ್‌ ಗೆ ಅವಕಾಶ ನೀಡದ ಕಾರಣ ಸರ್ಕಾರಿ ಉರ್ದು ಶಾಲೆಗೆ ಗೈರು ಹಾಜರಾಗಿದ್ದಾರೆ. ಇಲ್ಲಿ ಜಗತ್‌ನಗರದಲ್ಲಿರುವ ಉರ್ದು ಪ್ರೌಢ ಶಾಲೆಯಲ್ಲಿ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಆದ್ರೆ, ಹಿಜಾಬ್‌ ಹಾಕಿಕೊಂಡು ಬರಬಾರದು ಅನ್ನೋ ಕಾರಣಕ್ಕೆ ಎಲ್ಲಾ ವಿದ್ಯಾರ್ಥಿಗಳು ಇಂದು ಶಾಲೆಗೆ ಬಂದಿಲ್ಲ. ಹೀಗಾಗಿ ತರಗತಿಗಳು ಖಾಲಿ ಇದ್ದು, ಶಾಲೆಯಲ್ಲಿ ಶಿಕ್ಷಕರು ಮಾತ್ರ ಹಾಜರಿದ್ದಾರೆ.

Share Post