Districts

ಮೇಕೆದಾಟು ಪಾದಯಾತ್ರೆಯಲ್ಲಿ ಮುರುಘಾ ಶ್ರೀಗಳು ಭಾಗಿ; ಶ್ರೀಗಳ ಕಾಲಿಗೆರಗಿದ ಡಿಕೆಶಿ

ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯ ಹೊರಟ ಯಶಸ್ವಿಯಾಗಲಿ ಎಂದು ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮುರುಘಾ ಶರಣ ಸ್ವಾಮೀಜಿಗಳು ಹಾರೈಸಿದ್ದಾರೆ. ಬಿಡದಿ ಮತ್ತು ಕೆಂಗೇರಿ ನಡುವಣ ಕೇತಗಾನಹಳ್ಳಿಯ ಬಳಿ ಅನೇಕ ಸ್ವಾಮೀಜಿಗಳ ಜತೆ ಪಾದಯಾತ್ರೆ ಸೇರಿಕೊಂಡ ಶ್ರೀಗಳು ಹೋರಾಟ ಯಶಸ್ವಿಯಾಗಲಿ ಎಂದು ಆಶೀರ್ವಾದ ಮಾಡಿದರು.

ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಸ್ವಾಮೀಜಿಗಳ ಕಾಲಿಗೆರಗಿ ನಮಿಸಿದರು. ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ‘ಮುರುಘಾ ಮಠದ ಶ್ರೀಗಳು ಎಲ್ಲ ಧರ್ಮ ಗುರುಗಳ ಜೊತೆಯಲ್ಲಿ ಪಾದಯಾತ್ರೆಗೆ ಆಗಮಿಸಿದ್ದಾರೆ. ಶ್ರೀ ಮುರುಘಾ ಸ್ವಾಮೀಜಿಗಳ ಪಾದಗಳಿಗೆ ನಮ್ಮ ನಮನಗಳು. ಮಾದಾರ ಚನ್ನಯ್ಯ ಸ್ವಾಮೀಜಿಗಳು, ಮಡಿವಾಳ ಶ್ರೀಗಳು, ಗಂಗಾವತಿ ಶ್ರೀಗಳು, ಹಾವೇರಿ ಶ್ರೀಗಳು, ಹರಿಹರ ಶ್ರೀಗಳು ಸೇರಿದಂತೆ ಎಲ್ಲರೂ ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಬಂದಿದ್ದಾರೆ. ಕುಡಿಯುವ ನೀರಿಗಾಗಿ ಸ್ವಾಮೀಜಿಗಳು ನಮ್ಮ ಕಾರ್ಯಕರ್ತರು ಹಾಗೂ ನಾಯಕರ ಜತೆ ಹೆಜ್ಜೆ ಹಾಕುತ್ತಿದ್ದಾರೆ ಎಂದರು.

Share Post