Health

Covid 19 : ದೇಶಾದ್ಯಂತ 24ಗಂಟೆಯಲ್ಲಿ 1.68 ಲಕ್ಷ ಹೊಸ ಪ್ರಕರಣಗಳು ಪತ್ತೆ

ನವದೆಹಲಿ : ಕೋವಿಡ್‌ ಮೂರನೇ ಅಲೆ ಹರಡುವಿಕೆ ತೀವ್ರವಾಗಿದೆ. ದೇಶದಾದ್ಯಾಂತ 24 ಗಂಟೆಯಲ್ಲಿ 1,68,063 ಹೊಸ ಪ್ರಕರಣಗಳು ಪತ್ತೆಯಾಗಿದೆ ಜೊತೆಗೆ 277 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಈಗ ಒಟ್ಟು 8,21,446 ಸಕ್ರಿಯ ಪ್ರಕರಣಗಳಿವೆ, ಈಗ ಪಾಸಿಟಿವಿಟಿ ರೇಟ್‌ ಶೇ 10.64ರಷ್ಟಿದೆ. ಸೋಮವಾರಕ್ಕೆ ಹೋಲಿಸಿದರೆ ಇಂದು 10 ಸಾವಿರ ಕೇಸ್‌ಗಳು ಕಡಿಮೆ ವರದಿಯಾಗಿದೆ.

ರಾಜ್ಯ ಸರ್ಕಾರಗಳು ಕೋವಿಡ್‌ ನಿಯಂತ್ರಣಕ್ಕೆ ಸಾಕಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದರೂ ಕೂಡ ಮೂರನೇ ಅಲೆಯ ಅಬ್ಬರಕ್ಕೆ ಇದು ಸಾಕಾಗುತ್ತಿಲ್ಲ ಎನಿಸುತ್ತಿದೆ.

ಸದ್ಯದ ಪರಿಸ್ಥಿತಿ ಅವಲೋಕಿಸಿ ನೋಡಿದರೆ ಮುಂದಿನ ದಿನಗಳಲ್ಲಿ ಸರ್ಕಾರಗಳು ಲಾಕ್‌ಡೌನ್‌ ನಿರ್ಧಾರಕ್ಕೆ ಬಂದರೂ ಬರಬಹುದು.

 

Share Post