ಮೈಸೂರು ಪಾಲಿಕೆ; ಉಪಮೇಯರ್ ಅದೃಷ್ಟವನ್ನೂ ಕಳ್ಕೊಂಡ ಜೆಡಿಎಸ್
ಮೈಸೂರು; ಮೈಸೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಮೇಯರ್ ಸ್ಥಾನ ಬಿಜೆಪಿಗೆ ಹಾಗೂ ಉಪಮೇಯರ್ ಸ್ಥಾನ ಜೆಡಿಎಸ್‌ಗೆ ಎಂದು ಮಾತುಕತೆ ನಡೆದಿತ್ತು. ಆದ್ರೆ, ಜೆಡಿಎಸ್‌ಗೆ ಉಪಮೇಯರ್ ಸ್ಥಾನ ಕೂಡಾ ಸಿಗಲಿಲ್ಲ. ಮೈತ್ರಿ ಕೂಟದ ಅಭ್ಯರ್ಥಿ ಜೆಡಿಎಸ್‌ನ ರೇಷ್ಮಾ ಭಾನು ನಾಮಪತ್ರ ತಿರಸ್ಕೃತವಾದ್ದರಿಂದ ಬಿಜೆಪಿಗೆ ಉಪ ಮೇಯರ್ ಸ್ಥಾನವೂ ದೊರೆಯಿತು.
ರೇಷ್ಮಾ ಅವರು ಸಾಮಾನ್ಯ ಕ್ಷೇತ್ರದಿಂದ ಗೆದ್ದಿದ್ದಾರೆ. ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿತ್ತು. ರೇಷ್ಮಾ ಬಾನು ಜಾತಿ ಪ್ರಮಾಣಪತ್ರ ನೀಡದಿದ್ದರಿಂದ ನಾಮಪತ್ರ ಕ್ರಮಬದ್ಧವಾಗಿಲ್ಲ ಎಂದು ತಿರಸ್ಕರಿಸಲಾಯಿತು. ಇದರಿಂದ ಜೆಡಿಎಸ್ ಆಘಾತ ಅನುಭವಿಸಬೇಕಾಯಿತು. ಜೆಡಿಎಸ್ ಬಂಡಾಯ ಅಭ್ಯರ್ಥಿ ನಿರ್ಮಲಾ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದ್ದರಿಂದ ಅವರು, 27 ಮತಗಳನ್ನು ಪಡೆದರು. ಬಿಜೆಪಿಯ ಜಿ.ರೂಪಾ 45 ಮತಗಳನ್ನು ಗಳಿಸಿ ಗೆಲುವು ಸಾಧಿಸಿದರು.