CrimeDistricts

ಹಳ್ಳದಲ್ಲಿ ಕೊಚ್ಚಿಹೋದ ಇಬ್ಬರು ಪೊಲೀಸ್‌ ಪೇದೆಗಳು..!

ಕೊಪ್ಪಳ; ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಇಬ್ಬರು ಪೊಲೀಸ್‌ ಪೇದೆಗಳು ನಾಪತ್ತೆಯಾಗಿದ್ದಾರೆ. ಕುಕನೂರು ತಾಲೂಕಿನ ತೊಂಡಿಹಾಳ ಗ್ರಾಮದ ಬಳಿಯ ಹಳ್ಳದಲ್ಲಿ ಇಬ್ಬರೂ ಕೊಚ್ಚಿಹೋಗಿರಬಹುದು ಎಂದು ಶಂಕಿಸಲಾಗಿದೆ.

 ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಹೇಶ್ ಹಾಗೂ ನಿಂಗಪ್ಪ ನಾಪತ್ತೆಯಾಗಿರುವವರು.  ಈ ಇಬ್ಬರು ಪೊಲೀಸರು ಗದಗ ಜಿಲ್ಲೆಯ ಗಜೇಂದ್ರಗಡಕ್ಕೆ ಸೋಮವಾರ ಬಂದೋಬಸ್ತಗೆಂದು ತೆರಳಿದ್ದರು. ನಿನ್ನೆ ಕರ್ತವ್ಯ ಮುಗಿಸಿ ಮನೆಗೆ ಮರಳುವಾಗ ಮಳೆಯಿಂದಾಗಿ ತುಂಬಿಹರಿಯುತ್ತಿದ್ದ ತೊಂಡಿಹಾಳ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗುತ್ತಿದೆ.  ಅಗ್ನಿ ಶಾಮಕ ದಳ ಸಿಬ್ಬಂದಿಯಿಂದ ಹಳ್ಳದಲ್ಲಿ ಪೊಲೀಸರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Share Post